ಬೆಂಡೆಕಾಯಿಯಿಂದ ಹೀಗೂ ಪಲ್ಯ ಮಾಡಬಹುದು

ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಚಕ್ರದಂತೆ ಹೆಚ್ಚಿ ಉಪ್ಪು, ಖಾರ ಹಾಕಿ ಪಲ್ಯ ಮಾಡುತ್ತೇವೆ. ಆದರೆ ಈ ರೀತಿ ಉದ್ದಕೆ ಸೀಳಿ ವ್ಯತ್ಯಸ್ಥವಾಗಿ ಪಲ್ಯ ಮಾಡಬಹುದು ಗೊತ್ತಾ?

Photo Credit: Instagram

ಬೆಂಡೆಕಾಯಿಯನ್ನು ಉದ್ದಕ್ಕೆ ಸೀಳಿದ ರೀತಿಯಲ್ಲಿ ಕತ್ತರಿಸಿಕೊಳ್ಳಿ

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಹಾಕಿ

ಇದಕ್ಕೆ ಸ್ವಲ್ಪ ಜಜ್ಜಿದ ಬೆಳ್ಳುಳ್ಳಿ ಸೇರಿಸಿಕೊಳ್ಳಿ

ಈಗ ಇದಕ್ಕೆ ಬೆಂಡೆಕಾಯಿಯನ್ನೂ ಸೇರಿಸಿ ಎಣ್ಣೆಯಲ್ಲಿ ಫ್ರೈ ಮಾಡಿ

ಬಳಿಕ ಸ್ವಲ್ಪ ಉಪ್ಪು, ಖಾರದಪುಡಿ, ಅರಿಶಿನ ಪುಡಿ ಸೇರಿಸಿ ಬೇಯಿಸಿ

ಈಗ ಕೊತ್ತಂಬರಿ ಸೊಪ್ಪು, ಕೊಬ್ಬರಿ, ಬೆಳ್ಳುಳ್ಳಿ, ಜೀರಿಗೆ ಪುಡಿ ಮಾಡಿ

ಇದನ್ನು ಬೆಂದ ಹೋಳಿಗೆ ಸೇರಿಸಿಕೊಂಡರೆ ಪಲ್ಯ ರೆಡಿ.

ಗಮನಿಸಿ: ಈ ಪಾಕ ವಿಧಾನವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.