ಕಡ್ಲೆ ಹಿಟ್ಟು ಬಳಸದೇ ಪಾಲಕ್ ವಡೆ ಮಾಡಿ

ಸಾಮಾನ್ಯವಾಗಿ ಸೊಪ್ಪಿನ ವಡೆ ಮಾಡುವಾಗ ಕಡ್ಲೆ ಹಿಟ್ಟು ಬಳಸುತ್ತೇವೆ. ಆದರೆ ಕಡ್ಲೆ ಹಿಟ್ಟು ಬಳಸದೇ ಪಾಲಕ್ ಸೊಪ್ಪಿನ ರುಚಿಕರ ವಡೆ ಮಾಡುವುದು ಹೇಗೆ ನೋಡಿ.

Photo Credit: Instagram

ಪಾಲಕ್ ಸೊಪ್ಪು ತೊಳೆದು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ

ಈಗ ಒಂದು ಕಪ್ ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ ಹಿಂಡಿ ಇಟ್ಟುಕೊಳ್ಳಿ

ಪಾಲಕ್ ಸೊಪ್ಪಿಗೆ ಈರುಳ್ಳಿ, ತುರಿದು ಕ್ಯಾರೆಟ್, ಹಸಿಮೆಣಸು, ಖಾರದ ಪುಡಿ ಬೆರೆಸಿ

ಈಗ ಬೇಯಿಸಿದ ಆಲೂಗಡ್ಡೆ ಕಿವುಚಿ, ನೆನೆಸಿದ ಅವಲಕ್ಕಿಯನ್ನು ಸೇರಿಸಿ ನಿಂಬೆ ರಸ ಹಾಕಿ

ಇದಕ್ಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಹಿಟ್ಟು ರೆಡಿ ಮಾಡಿ ವಡೆ ತಟ್ಟಿಕೊಳ್ಳಿ

ಒಂದು ತವಾಗೆ ಸ್ವಲ್ಪ ಎಣ್ಣೆ ಹಾಕಿ ವಡೆ ಇಟ್ಟು ಎರಡೂ ಬದಿ ಬೇಯಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ