ರುಚಿಕರ ಫುಲ್ಕಾ ಮಾಡುವುದು ಹೇಗೆ

ಚಪಾತಿ ತಿಂದು ಬೋರಾಗಿದ್ದರೆ ಅದನ್ನೇ ಸ್ವಲ್ಪ ಡಿಫರೆಂಟಾಗಿ ನಾರ್ತ್ ಇಂಡಿಯನ್ ಸ್ಟೈಲ್ ನಲ್ಲಿ ಫುಲ್ಕಾ ಮಾಡಬಹುದು. ಫುಲ್ಕಾ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಮೊದಲು ಒಂದು ಬೌಲ್ ನಲ್ಲಿ ಒಂದು ಕಪ್ ಗೋದಿ ಹಿಟ್ಟು ತೆಗೆದುಕೊಳ್ಳಿ

ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಕಲಸಿ ನಂತರ ಅರ್ಧಕಪ್ ನಷ್ಟು ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ

ಹಿಟ್ಟನ್ನು ಹದ ಬರುವ ತನಕ ಚೆನ್ನಾಗಿ ನಾದಿಕೊಂಡ ಬಳಿಕ ಒದ್ದೆಬಟ್ಟೆ ಹಾಕಿ ಮುಚ್ಚಿ

ಅರ್ಧಗಂಟೆ ಬಿಟ್ಟು ಹಿಟ್ಟು ತೆಗೆದು ಚಪಾತಿಯ ರೀತಿಯ ಒಂದೇ ಹದಕ್ಕೆ ಲಟ್ಟಿಸಿಕೊಳ್ಳಿ

ಈಗ ಇದನ್ನು ಒಂದು ಕಾದ ತವಾ ಮೇಲೆ ಹಾಕಿ ಎರಡೂ ಬದಿ ಬಾಡಿಸಿಕೊಳ್ಳಬೇಕು

ಬಾಡಿಸುವಾಗ ಒಂದು ಒದ್ದೆ ಬಟ್ಟೆ ತೆಗೆದುಕೊಂಡು ಅದರ ಮೇಲೆ ಒರೆಸಿಕೊಳ್ಳಬೇಕು

ಬಿಸಿ ಇರುವಾಗಲೇ ನೇರವಾಗಿ ಕೆಂಡ ಅಥವಾ ಗ್ಯಾಸ್ ಒಲೆಯ ಮೇಲೆ ಹಾಕಿದರೆ ಫುಲ್ಕಾ ಉಬ್ಬಿ ಬರುತ್ತದೆ