ಎಣ್ಣೆ ಹಾಕದೇ ಪಾಪ್ ಕಾರ್ನ್ ಹೀಗೂ ಮಾಡಬಹುದು

ಪಾಪ್ ಕಾರ್ನ್ ಮನೆಯಲ್ಲಿಯೇ ಮಾಡುವಾಗ ಅದಕ್ಕೆ ಎಣ್ಣೆ ಹಾಕುವುದು ಅನಿವಾರ್ಯ. ಆದರೆ ಎಣ್ಣೆಯಿಲ್ಲದೇ ಪಾಪ್ ಕಾರ್ನ್ ನ್ನು ಈ ರೀತಿ ಮಾಡಬಹುದು.

Photo Credit: Instagram

ಒಂದು ಸಿಲ್ವರ್ ಶೀಟ್ ತೆಗೆದುಕೊಂಡು ಅದರಲ್ಲಿ ಒಣ ಕಾರ್ನ್ ಹಾಕಿ

ಈಗ ಇದರ ಮೇಲಿನಿಂದ ಒಂದು ಪೀಸ್ ಬೆಣ್ಣೆ ಅಥವಾ ಚೀಸ್ ಇಟ್ಟು ಉಪ್ಪು ಹಾಕಿ

ಮೇಲಿನಿಂದ ಮತ್ತೊಂದು ಸಿಲ್ವರ್ ಶೀಟ್ ಹಾಕಿ ನಾಲ್ಕೂ ಕಡೆ ಸೀಲ್ ಮಾಡಿ

ಈಗ ಒಂದು ತವಾವನ್ನು ಒಲೆ ಮೇಲಿಟ್ಟು ಪ್ರಿ ಹೀಟ್ ಮಾಡಿ ಸೀಲ್ ಮಾಡಿದ ಶೀಟ್ ಇಡಿ

ಈಗ 5 ರಿಂದ 10 ನಿಮಿಷದಲ್ಲಿ ಕಾರ್ನ್ ಸಿಡಿಯುತ್ತದೆ

ಈಗ ಪಾಪ್ ಕಾರ್ನ್ ಪ್ಯಾಕೆಟ್ ಹೊರತೆಗೆದು ಪ್ಯಾಕೆಟ್ ಓಪನ್ ಮಾಡಿ

ಸ್ವಲ್ಪವೂ ಹೊರಚೆಲ್ಲದೇ ಕಾರ್ನ್ ರೆಡಿಯಾಗಿರುತ್ತದೆ