ಆಲೂಗಡ್ಡೆ ಚಿಪ್ಸ್ ಮಾಡುವುದು ಹೇಗೆ

ಆಲೂಗಡ್ಡೆ ಚಿಪ್ಸ್ ಮನೆಯಲ್ಲಿ ಮಾಡುವಾಗ ಅಂಗಡಿಯಲ್ಲಿ ಸಿಗುವಂತೆ ಆಗಲ್ಲ ಎಂಬ ಸಮಸ್ಯೆಯಿದ್ದರೆ ಈ ರೀತಿ ಮಾಡಿ ನೋಡಿ.

Photo Credit: Instagram

ಆಲೂಗಡ್ಡೆ ಚಿಪ್ಸ್ ಮಾಡಲು ಗುಣಮಟ್ಟದ ಆಲೂಗಡ್ಡೆ ಬೇಕು

ಇದರ ಸಿಪ್ಪೆ ತೆಗೆದು ಕೆಲವು ಕಾಲ ನೀರಿನಲ್ಲಿ ನೆನೆಸಿಡಿ

ಬಳಿಕ ನೀರಿನಿಂದ ಹೊರತೆಗೆದು ಸ್ಲೈಝ್ ಮಾಡಿಕೊಳ್ಳಿ

ಇದರ ಮೇಲೆ ಟಿಶ್ಯೂ ಪೇಪರ್ ಹಾಕಿ ನೀರಿನಂಶ ತೆಗೆಯಬೇಕು

ಆಲೂಗಡ್ಡೆಯಲ್ಲಿ ನೀರಿನಂಶವಿದ್ದರೆ ಚಿಪ್ಸ್ ಕ್ರಿಸ್ಪಿಯಾಗದು

ಬಳಿಕ ಎಣ್ಣೆಯನ್ನು ಮಧ್ಯಮ ಉರಿಯಲ್ಲಿಟ್ಟುಕೊಂಡು ಹುರಿಯಿರಿ

ಇದು ಹೊಂಬಣ್ಣ ಬರುವಾಗ ಸ್ವಲ್ಪ ಉಪ್ಪು ನೀರು ಚಿಮುಕಿಸಿ ತೆಗೆದರೆ ಚಿಪ್ಸ್ ರೆಡಿ