ಕಳ್ಳೆಪುರಿ ಉಳಿದಿದ್ದರೆ ದೋಸೆ ಮಾಡಿ

ನವರಾತ್ರಿ ಪೂಜೆಗೆಂದು ತಂದಿದ್ದ ಕಳ್ಳೆಪುರಿ ಉಳಿದಿದ್ದರೆ ಅದರಿಂದ ರುಚಿ ರುಚಿಯಾಗಿ ದಿಡೀರ್ ದೋಸೆ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಮಿಕ್ಸಿ ಜಾರ್ ಗೆ ಒಂದು ಬೌಲ್ ಕಳ್ಳೆಪುರಿ ಹಾಕಿ

ಇದಕ್ಕೆ ಅರ್ಧ ಕಪ್ ಮೀಡಿಯಂ ರವೆ ಸೇರಿಸಿ

ಬಳಿಕ ಅರ್ಧ ಕಪ್ ಮೊಸರು ಮತ್ತು ನೀರು ಹಾಕಿ ನುಣ್ಣಗೆ ರುಬ್ಬಿ

ಈ ಹಿಟ್ಟಿಗೆ ರುಚಿಗೆ ತಕ್ಕ ಉಪ್ಪು, ಜೀರಿಗೆ ಹಾಕಿಕೊಳ್ಳಿ

ಬಳಿಕ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಸೇರಿಸಿ ಕಲಸಿಕೊಳ್ಳಿ

ಈಗ ದೋಸೆ ಹುಯ್ದು ಮೇಲಿನಿಂದ ಖಾರದಪುಡಿ ತುಪ್ಪ ಹಾಕಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.