ಪುಳಿಯೋಗರೆ ಗೊಜ್ಜು ಮನೆಯಲ್ಲೇ ಮಾಡುವುದು ಹೇಗೆ

ಪುಳಿಯೋಗರೆ ಗೊಜ್ಜು ಮನೆಯಲ್ಲೇ ಮಾಡಿದರೆ ಅದರ ಘಮವೇ ಬೇರೆ. ಮನೆಯಲ್ಲಿಯೇ ಪುಳಿಯೋಗರೆ ಗೊಜ್ಜು ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಬಾಣಲೆಗೆ ಕಡಲೆ ಬೇಳೆ, ಉದ್ದಿನಬೇಳೆ, ಧನಿಯಾ, ಜೀರಿಗೆ ಹಾಕಿ ಡ್ರೈ ರೋಸ್ಟ್ ಮಾಡಿ

ಇದಕ್ಕೆ ಮೆಂತೆ, ಕಾಳುಮೆಣಸು, ಎಳ್ಳು, ಕೆಂಪು ಮೆಣಸು, ಕರಿಬೇವು ಸೇರಿಸಿ

ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ಡ್ರೈ ಪುಡಿ ಮಾಡಿ

ಈಗ ಬಾಣಲೆಗೆ ಎಣ್ಣೆ ಹಾಕಿಸಾಸಿವೆ, ಕಡಲೆಬೇಳೆ, ನೆಲಗಡಲೆ, ಕೆಂಪು ಮೆಣಸು ಹಾಕಿ

ಇದು ಸಿಡಿದಾಗ ಹುಣಸೆ ರಸ, ಬೆಲ್ಲ, ರುಚಿಗೆ ತಕ್ಕ ಉಪ್ಪು, ಪುಡಿ ಮಾಡಿದ ಮಸಾಲೆ ಸೇರಿಸಿ

ಇದನ್ನು ಚೆನ್ನಾಗಿ ಕುದಿಸಿದರೆ ಪುಳಿಯೋಗರೆ ಗೊಜ್ಜು ರೆಡಿ

ಗಮನಿಸಿ: ಮೇಲೆ ಹೇಳಿದ ವಿಧಾನ ವಿವಿಧ ಮೂಲಗಳನ್ನು ಆಧರಿಸಿದ್ದಾಗಿದೆ.