ಪಂಜಾಬಿ ಸ್ಟೈಲ್ ಹಸಿಮೆಣಸಿನ ಕಾಯಿ ಉಪ್ಪಿನಕಾಯಿ

ಹಸಿಮೆಣಸಿನಕಾಯಿಯಿಂದ ಉಪ್ಪಿನಕಾಯಿಯನ್ನೂ ಮಾಡಬಹುದು. ಪಂಜಾಬ್ ಸ್ಟೈಲ್ ನಲ್ಲಿ ಹಸಿಮೆಣಸಿನಕಾಯಿ ಉಪ್ಪಿನ ಕಾಯಿ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಎಳೆಯ ಮೆಣಸಿನ ಕಾಯಿಗಳನ್ನು ತೊಳೆದು ಬಟ್ಟೆಯಿಂದ ಒರೆಸಿಡಿ

ಈಗ ಇವುಗಳ ತೊಟ್ಟು ತೆಗೆದು ಅಡ್ಡಲಾಗಿ ಸೀಳಿ ಎರಡು ಭಾಗ ಮಾಡಿಟ್ಟುಕೊಳ್ಳಿ

ಒಂದು ಬಾಣಲೆಗೆ ಸಾಸಿವೆ, ಜೀರಿಗೆ, ಮೆಂತೆ ಹಾಕಿ ಎಣ್ಣೆ ಹಾಕದೇ ಡ್ರೈ ಫ್ರೈ ಮಾಡಿ

ಇದು ಫ್ರೈ ಆದ ಬಳಿಕ ಮಿಕ್ಸಿಗೆ ಹಾಕಿ ನೀರು ಹಾಕದೇ ಪುಡಿ ಮಾಡಿಕೊಳ್ಳಿ

ಈಗ ಸೀಳಿಟ್ಟುಕೊಂಡ ಹಸಿಮೆಣಸಿಗೆ ಸ್ವಲ್ಪ ಉಪ್ಪು, ಖಾರದ ಪುಡಿ ಹಾಕಿ

ಬಳಿಕ ರುಬ್ಬಿದ ಮಸಾಲೆ ಪುಡಿಯನ್ನೂ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ

ಈಗ ಇದಕ್ಕೆ ಒಂದು ಸೌಟಿನಷ್ಟು ಎಣ್ಣೆ ಕುದಿಸಿ ಸೇರಿಸಿದರೆ ಉಪ್ಪಿನಕಾಯಿ ರೆಡಿ