ದಿಡೀರ್ ಆಗಿ ರಾಗಿ ಇಡ್ಲಿ ಮಾಡುವ ವಿಧಾನ

ರಾಗಿ ಆರೋಗ್ಯಕ್ಕೆ ತುಂಬಾ ಉತ್ತಮ. ರಾಗಿ ಹಿಟ್ಟು ಬಳಸಿ ದಿಡೀರ್ ಆಗಿ ಮತ್ತು ಸುಲಭವಾಗಿ ಮಾಡಬಹುದಾದ ಇಡ್ಲಿ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಮೊದಲು ಒಂದು ಬೌಲ್ ಗೆ ಒಂದು ಕಪ್ ರವೆ ಮತ್ತು ರಾಗಿ ಹಿಟ್ಟು ಹಾಕಿ

ಇದಕ್ಕೆ ಅರ್ಧ ಕಪ್ ನಷ್ಟು ಮೊಸರು ಸೇರಿಸಿಕೊಳ್ಳಿ

ಈಗ ಇದಕ್ಕೆ ಒಂದು ಬೌಲ್ ನಷ್ಟು ನೀರು, ಉಪ್ಪು ಸೇರಿಸಿಕೊಳ್ಳಿ

ಈಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ

ಬಳಿಕ ಅರ್ಧಗಂಟೆ ಇದನ್ನು ಮುಚ್ಚಿಟ್ಟು ತೆಗೆದರೆ ಹುಳಿ ಬಂದಿರುತ್ತದೆ

ಈಗ ಇಡ್ಲಿ ಕುಕ್ಕರ್ ಗೆ ಸ್ವಲ್ಪ ತುಪ್ಪ ಸವರಿಕೊಂಡು ಹಿಟ್ಟು ಹಾಕಿ

ಇದನ್ನು 20 ನಿಮಿಷ ಬೇಯಿಸಿದರೆ ರಾಗಿ ಇಡ್ಲಿ ರೆಡಿಯಾಗಿರುತ್ತದೆ.