ಕಾಯಿ ಟೊಮೆಟೊ ಚಟ್ನಿ ಮಾಡುವ ವಿಧಾನ

ಸಾಮಾನ್ಯವಾಗಿ ಟೊಮೆಟೊ ಹಣ್ಣಿನ ಚಟ್ನಿ ಮಾಡುತ್ತೇವೆ. ಆದರೆ ಕಾಯಿ ಟೊಮೆಟೊ ಅಥವಾ ಹಸಿರಾಗಿರುವ ಟೊಮೆಟೊ ಬಳಸಿ ರುಚಿಕರ ಚಟ್ನಿ ಮಾಡಬಹುದು. ಹೇಗೆ ಎಂದು ಅದರ ರೆಸಿಪಿಗಾಗಿ ಇಲ್ಲಿ ನೋಡಿ.

Photo Credit: AI image

ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಹಾಕದೇ ಶೇಂಗಾ ಬೀಜ ಹುರಿಯಿರಿ

ಅದನ್ನು ಪ್ರತ್ಯೇಕವಾಗಿರಿಸಿ ಬಾಣಲೆಗೆ ಎಣ್ಣೆ ಹಾಕಿ ಕಡಲೆಬೇಳೆಯನ್ನು ಕೆಂಪಗಾಗುವ ತನಕ ಹುರಿಯಿರಿ

ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮಿಕ್ಸ್ ಮಾಡಿ ಹುರಿಯಿರಿ

ಬಳಿಕ ತೊಳೆದು ಉದ್ದಕೆ ಸೀಳಿಕೊಂಡ ಕಾಯಿ ಟೊಮೆಟೊವನ್ನು ಸೇರಿಸಿ ಫ್ರೈ ಮಾಡಿ

ಇದು ಬಣ್ಣ ಬೇಯುವವರೆ ಫ್ರೈ ಮಾಡಿದ ಬಳಿಕ ಎಲ್ಲವನ್ನೂ ಒಂದು ಮಿಕ್ಸಿ ಜಾರಿಗೆ ಹಾಕಿ

ಇದಕ್ಕೆ ಈಗಾಗಲೇ ಹುರಿದಿಟ್ಟ ನೆಲಗಡಲೆ, ಕೊತ್ತಂಬರಿ ಸೊಪ್ಪು ಸೇರಿಸಿ ಸ್ವಲ್ಪವೇ ನೀರು ಸೇರಿಸಿ ರುಬ್ಬಿಕೊಳ್ಳಿ

ನುಣ್ಣಗೆ ರುಬ್ಬಿಕೊಂಡ ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡರೆ ಕಾಯಿ ಟೊಮೆಟೊ ಚಟ್ನಿ ರೆಡಿ