ರೆಸ್ಟೋರೆಂಟ್ ಸ್ಟೈಲ್ ಪನೀರ್ ಕರಿ

ರೆಸ್ಟೋರೆಂಟ್ ನಲ್ಲಿ ರೋಟಿ ಜೊತೆಗೆ ಸಿಗುವ ಪನೀರ್ ಕರಿ ರುಚಿಯೇ ರುಚಿ. ಇದನ್ನು ನಾವು ಮನೆಯಲ್ಲಿಯೂ ಮಾಡಬಹುದು. ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಪನೀರ್ ನ್ನು ಕತ್ತರಿಸಿ ಅದಕ್ಕೆ ಉಪ್ಪು, ಖಾರ, ಅರಿಶಿನ ಸೇರಿಸಿ

ಈಗ ಬಾಣಲೆಗೆ ಎಣ್ಣೆ ಹಾಕಿ ಚಕ್ಕೆ, ಲವಂಗ, ಜೀರಿಗೆ, ಕೆಂಪುಮೆಣಸು ಹಾಕಿ ಹುರಿಯಿರಿ

ಇದಕ್ಕೆ ಸ್ವಲ್ಪ ಈರುಳ್ಳಿ, ಟೊಮೆಟೊ ಸೇರಿಸಿ ಫ್ರೈ ಮಾಡಿ

ಇದನ್ನು ಒಂದು ಮಿಕ್ಸಿ ಜಾರ್ ಗೆ ಹಾಕಿ ಗೋಡಂಬಿಯನ್ನು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ

ಈಗ ಒಂದು ಬಾಣಲೆಗೆ ಒಗ್ಗರಣೆ ಹಾಕಿ ಅದಕ್ಕೆ ಮಸಾಲೆ ಬೆರೆಸಿದ ಪನೀರ್ ಸೇರಿಸಿ

ಇದು ಫ್ರೈ ಆದಾಗ ರುಬ್ಬಿದ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ಸುಲಭವಾಗಿ ಪನೀರ್ ಕರಿ ರೆಡಿ

ಗಮನಿಸಿ: ಈ ವಿಧಾನ ಕೇವಲ ಮಾಹಿತಿಗಾಗಿ ಮಾತ್ರ