ರುಚಿಕರ ಬಟಾಣಿ ರೋಸ್ಟ್ ಮಾಡುವ ವಿಧಾನ
ಹಸಿ ಬಟಾಣಿ ಬಳಸಿ ರುಚಿಕರವಾಗಿ ಬಟಾಣಿ ಕಡಲೆ ಅಥವಾ ರೋಸ್ಟೆಡ್ ಬಟಾಣಿ ಮಾಡುವುದು ತುಂಬಾ ಸುಲಭ. ಇಲ್ಲಿದೆ ವಿಧಾನ.
Photo Credit: Instagram
ಮೊದಲು ಬಟಾಣಿ ಕೋಡು ಬಿಡಿಸಿಟ್ಟುಕೊಳ್ಳಿ
ಈಗ ಇದನ್ನು ಚೆನ್ನಾಗಿ ತೊಳೆದುಕೊಂಡು ನೀರು ಬಸಿದುಕೊಳ್ಳಿ
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ
ಈಗ ಬಟಾಣಿ ಕಾಳುಗಳನ್ನು ಅದಕ್ಕೆ ಹಾಕಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ
ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ
ಬಳಿಕ ಸ್ವಲ್ಪ ಖಾರದ ಪುಡಿ, ಅರಿಶಿನ ಸೇರಿಸಿ ಫ್ರೈ ಮಾಡಿ
ಬಟಾಣಿ ಸಿಪ್ಪೆ ಒಡೆದು ಬರುವಷ್ಟು ಫ್ರೈ ಮಾಡಿದರೆ ಸಾಕು