ಎಳ್ಳಿನ ಲಡ್ಡು ಮಾಡುವ ವಿಧಾನ

ಗಣೇಶನಿಗೆ ಪ್ರಿಯವಾದ ವಸ್ತುಗಳಲ್ಲಿ ಎಳ್ಳು ಕೂಡಾ ಒಂದು. ತಿಂಡಿ ತಿನಿಸು ಎಂದರೆ ಪಕ್ಕನೇ ನೆನಪಾಗುವವನೇ ಗಣಪತಿ ದೇವರು. ಗಣೇಶ ಹಬ್ಬಕ್ಕೆ ಎಳ್ಳಿನ ರುಚಿಕರ ಲಡ್ಡು ಮಾಡುವ ವಿಧಾನ ಹೇಗೆ ಎಂದು ತಿಳಿದುಕೊಳ್ಳಿ.

Photo Credit: Instagram

ಬಿಳಿ ಅಥವಾ ಕಪ್ಪು ಎಳ್ಳು ಸೇರಿದಂತೆ ಯಾವುದೇ ಬಗೆಯ ಎಳ್ಳಿನಿಂದ ಎಳ್ಳಿನ ಲಡ್ಡು ತಯಾರಿಸಬಹುದು

ಎಳ್ಳು ದೇಹಕ್ಕೆ ತಂಪು ಮಾತ್ರವಲ್ಲದೆ, ಇದರಲ್ಲಿ ಕಬ್ಬಿಣದಂಶ ಹೇರಳವಾಗಿದ್ದು, ಎಲುಬಿನ ಆರೋಗ್ಯಕ್ಕೂ ಉತ್ತಮ

ಮೊದಲು ಎಳ್ಳನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ

ಬಳಿಕ ಹುರಿದ ಎಳ್ಳನ್ನು ಒಂದು ಪೇಪರ್ ನಲ್ಲಿ ಹರಡಿಕೊಂಡು ತಣ್ಣಗಾಗಲು ಬಿಡಿ

ಈಗ ಒಂದು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬೆಲ್ಲ ಕರಗಲು ಇಡಿ

ಬೆಲ್ಲ ಕರಗಿದ ಬಳಿಕ ಒಲೆ ಆರಿಸಿ ಆ ಪಾಕಕ್ಕೆ ಹುರಿದಿಟ್ಟ ಎಳ್ಳನ್ನು ಸೇರಿಸಿಕೊಳ್ಳಿ

ಇದು ಕೊಂಚ ಕೈ ಮುಟ್ಟಲು ಸಾಧ್ಯವಾಗುವಷ್ಟು ತಣ್ಣಗಾದ ಬಳಿಕ ಉಂಡೆ ಕಟ್ಟಿಕೊಳ್ಳಿ