ನಿಂಬೆಹಣ್ಣಿನ ಚಟ್ನಿ ಮಾಡುವುದು ಹೇಗೆ ಗೊತ್ತಾ

ನಿಂಬೆಹಣ್ಣನ್ನು ಬಳಸಿ ಕಹಿಯೇ ಬಾರದಂತೆ ಖಾರ ಖಾರವಾಗಿ ಚಟ್ನಿ ಮಾಡುವುದು ಹೇಗೆ ನೋಡಿ. ಇದನ್ನು ದೋಸೆ, ಅನ್ನಕ್ಕೆ ಕಲಸಿ ತಿನ್ನಬಹುದು.

Photo Credit: Instagram

ನಿಂಬೆಹಣ್ಣನ್ನು ಕತ್ತರಿಸಿ ಎಣ್ಣೆಕಾದ ಬಳಿಕ ಬಾಣಲೆಗೆ ಹಾಕಿ

ಇದು ಫ್ರೈ ಆಗುವಾಗ ಈರುಳ್ಳಿ, ಟೊಮೆಟೊ ಹಾಕಿ ಫ್ರೈ ಮಾಡಿ

ಇದಕ್ಕೆ ಜೀರಿಗೆ, ಕಾಳುಮೆಣಸು, ಬೆಳ್ಳುಳ್ಳಿ ಕರಿಬೇವು ಸೇರಿಸಿ ಫ್ರೈ ಮಾಡಿ

ಇದು ಬೆಂದ ಬಳಿಕ ಗುಂಟೂರು ಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ

ಈಗ ಇದನ್ನು ಮಿಕ್ಸಿ ಜಾರಿಗೆ ವರ್ಗಾಯಿಸಿ ಸ್ವಲ್ಪ ಉಪ್ಪು ಸೇರಿಸಿ

ಇವೆಲ್ಲವನ್ನೂ ನೀರು ಹಾಕದೇ ನುಣ್ಣಗೆ ರುಬ್ಬಿಕೊಂಡರೆ ಚಟ್ನಿ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.