ಮಧುಮೇಹಿಗಳಿಗಾಗಿ ಶುಗರ್ ಲೆಸ್ ಕೇಕ್ ರೆಸಿಪಿ

ಮಧುಮೇಹಿಗಳು ಕೇಕ್ ತಿನ್ನಬೇಕು ಎಂದು ಬಯಸಿದರೆ ಈ ಕೇಕ್ ನ್ನು ಆರಾಮವಾಗಿ ಸೇವನೆ ಮಾಡಬಹುದು. ಸಕ್ಕರೆ, ಕ್ರೀಂ ಬಳಸದೇ ಮಾಡುವ ಶುಗರ್ ಲೆಸ್ ಕೇಕ್ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಮೊದಲು ಸ್ವಲ್ಪ ಖರ್ಜೂರ ತೆಗೆದುಕೊಂಡು ಹಾಲಿನಲ್ಲಿ ನೆನೆ ಹಾಕಿ

ಒಂದು ಗಂಟೆ ಬಳಿಕ ಇವುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿ

ಈಗ ಈ ಪೇಸ್ಟ್ ಗೆ ಕಾಲು ಕಪ್ ಗೋಧಿ ಹಿಟ್ಟು, ಕಾಲು ಕಪ್ ಎಣ್ಣೆ ಹಾಕಿ

ಇದಕ್ಕೆ ಕಾಲು ಕಪ್ ನಷ್ಟು ಮೊಸರು, ಕೋಕಂ ಪೌಡರ್ ಸೇರಿಸಿಕೊಳ್ಳಿ

ಈಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟು ರೆಡಿ ಮಾಡಿಕೊಳ್ಳಿ

ಇದನ್ನು ಒಂದು ಕೇಕ್ ಪ್ಯಾನ್ ಗೆ ಸುರುವಿಕೊಂಡು ಮೇಲಿನಿಂದ ಡ್ರೈ ಫ್ರೂಟ್ಸ್ ಹಾಕಿ

ಓವನ್ ನಲ್ಲಿ 40-45 ಉಷ್ಣಾಂಶದಲ್ಲಿ ಕೇಕ್ ಬೇಯಿಸಿದರೆ ಶುಗರ್ ಲೆಸ್ ಕೇಕ್ ರೆಡಿ