ಹುಣಸೆ ಹುಳಿಯ ಲಾಲಿಪಾಪ್ ಮಾಡುವ ವಿಧಾನ

ಚಿಕ್ಕವರಿದ್ದಾಗ ಇಷ್ಟಪಟ್ಟು ತಿನ್ನುತ್ತಿದ್ದ ಹುಣಸೆ ಹುಳಿಯ ಲಾಲಿಪಾಪ್ ನೆನಪಿರಬಹುದು. ಅದನ್ನು ಈಗಲೂ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಹಾಗಿದ್ದರೆ ಹುಣಸೆ ಹುಳಿಯ ಲಾಲಿಪಾಪ್ ತಯಾರಿಸುವುದು ಹೇಗೆ ನೋಡೋಣ.

Photo Credit: Instagram

ಮೊದಲಿಗೆ ಒಂದು ಕುಟಾಣಿಯಲ್ಲಿ ಜೀರಿಗೆ, ಉಪ್ಪು ಹಾಕಿಕೊಂಡು ಚೆನ್ನಾಗಿ ಜಜ್ಜಿಕೊಳ್ಳಿ

ಇದು ಸಂಪೂರ್ಣ ಪುಡಿಯಾಗದ ಮೇಲೆ ಇದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಜಜ್ಜಿಕೊಳ್ಳಿ

ಬೆಲ್ಲವೂ ಪುಡಿಯಾದ ಮೇಲೆ ಸ್ವಲ್ಪ ಹುಣಸೆ ಹುಳಿಯನ್ನು ಸೇರಿಸಿ ಮತ್ತಷ್ಟು ಜಜ್ಜಿ

ಒಂದು ವೇಳೆ ಕುಟಾಣಿಯಲ್ಲೇ ಸಂಪೂರ್ಣವಾಗಿ ಪುಡಿಯಾಗುತ್ತಿಲ್ಲ ಎನಿಸಿದರೆ ಮಿಕ್ಸಿಗೆ ಹಾಕಿ ರುಬ್ಬಬಹುದು

ಕುಟಾಣಿಯಲ್ಲಿ ಎಲ್ಲಾ ಒಂದು ಹದಕ್ಕೆ ಹುಡಿಯಾದ ಮೇಲೆ ಒಂದು ಸ್ಪೂನ್ ನೀರು ಸೇರಿಸಿ ಪುಡಿ ಮಾಡಿ

ಈಗ ಮುದ್ದೆಯಾಗಿರುವ ಹುಣಸೆ ಮಿಶ್ರಣವನ್ನು ಉಂಡೆ ಕಟ್ಟಿಕೊಳ್ಳಿ

ಇದನ್ನು ಐಸ್ ಕ್ರೀಂ ಸ್ಟಿಕ್ ಅಥವಾ ತೆಂಗಿನ ಗರಿಯ ಕಡ್ಡಿಗೆ ಸಿಕ್ಕಿಸಿ ಲಾಲಿಪಾಪ್ ನಂತೆ ಸವಿಯಬಹುದು