ಮಕ್ಕಳಿಗೆ ಹೀಗೆ ಚಪಾತಿ ರೋಲ್ ಮಾಡಿ ಕೊಡಿ

ಚಪಾತಿ ಹಾಗೇ ಕೊಟ್ಟರೆ ಬೋರ್ ಎನ್ನುವ ಮಕ್ಕಳಿಗೆ ಈ ರೀತಿ ರುಚಿಕರವಾಗಿ ಚಪಾತಿ ರೋಲ್ ಮಾಡಿಕೊಡಬಹುದು. ಚಪಾತಿ ರೋಲ್ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅರಿಶಿನ, ಖಾರದ ಪುಡಿ ಹಾಕಿ ಫ್ರೈ ಮಾಡಿ

ಇದಕ್ಕೆ ಬೇಯಿಸಿ ಹಿಚುಕಿದ ಆಲೂಗಡ್ಡೆಯನ್ನು ಸೇರಿಸಿ

ಬಳಿಕ ಇದಕ್ಕೆ ರುಚಿಗೆ ತಕ್ಕ ಉಪ್ಪು, ಸ್ವಲ್ಪ ಚಿಲ್ಲಿ ಟೊಮೆಟೊ ಸಾಸ್ ಸೇರಿಸಿ

ಇದನ್ನು ಫ್ರೈ ಮಾಡಿ ಚಪಾತಿ ಹಿಟ್ಟಿನ ಹದಕ್ಕೆ ಬೇಯಿಸಿ

ಈಗ ಚಪಾತಿ ಮಧ್ಯಭಾಗಕ್ಕೆ ಈ ಮಸಾಲೆಯನ್ನು ಹಾಕಿ

ಅದರ ಮೇಲಿನಿಂದ ಸ್ವಲ್ಪ ಪನೀರ್, ತರಕಾರಿಗಳನ್ನು ಹಾಕಿ

ಈಗ ಇದನ್ನು ರೋಲ್ ಮಾಡಿ ಬೇಯಿಸಿದರೆ ರುಚಿಕರ ಚಪಾತಿ ರೋಲ್ ಸಿದ್ಧ