ನೆಲ್ಲಿಕಾಯಿ ಸಾರು ರುಚಿಗೂ ಆರೋಗ್ಯಕ್ಕೂ ಬೆಸ್ಟ್

ನೆಲ್ಲಿಕಾಯಿ ನಮ್ಮ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಇದನ್ನು ಬಳಸಿಕೊಂಡು ಸೂಪರ್ ಆಗಿ ಒಂದು ಸಾರು ಮಾಡಿಕೊಂಡರೆ ರುಚಿ, ಆರೋಗ್ಯ ಎರಡಕ್ಕೂ ಬೆಸ್ಟ್.

Photo Credit: Instagram

ನೆಲ್ಲಿಕಾಯಿ, ಟೊಮೆಟೊ, ಶುಂಠಿ, ಹಸಿಮೆಣಸು ಕಟ್ ಮಾಡಿಕೊಳ್ಳಿ

ಬಾಣಲೆಗೆ ತುಪ್ಪ ಹಾಕಿ ಕಡಲೆ ಬೇಳೆ, ಉದ್ದಿನ ಬೇಳೆ, ಜೀರಿಗೆ ಹಾಕಿ

ಇದು ಸ್ವಲ್ಪ ಫ್ರೈ ಆದ ಮೇಲೆ ಧನಿಯಾ, ಕಾಳುಮೆಣಸು ಸೇರಿಸಿ

ಬಳಿಕ ಸ್ವಲ್ಪ ಕರಿಬೇವು, ಶುಂಠಿ, ಹಸಿಮೆಣಸು/ ಕೆಂಪು ಮೆಣಸು ಸೇರಿಸಿ

ಈಗ ಕತ್ತರಿಸಿಟ್ಟುಕೊಂಡ ನೆಲ್ಲಿಕಾಯಿ, ಟೊಮೆಟೊ ಹಾಕಿ ಫ್ರೈ ಮಾಡಿ

ಇವೆಲ್ಲವನ್ನೂ ನುಣ್ಣಗೆ ಪೇಸ್ಟ್ ಮಾಡಿ ಉಪ್ಪು, ಬೆಲ್ಲ ಹಾಕಿ ಕುದಿಸಿ ಒಗ್ಗರಣೆ ಕೊಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.