ಓಟ್ಸ್ ಬಳಸಿ ಹೆಲ್ತಿ ಆಗಿ ಕಿಚಡಿ ಮಾಡಿ

ಒಂದೇ ಥರಾ ತಿಂಡಿ ಮಾಡಿ ಬೋರ್ ಆಗಿದ್ದರೆ ಆರೋಗ್ಯಕರವಾಗಿ ಓಟ್ಸ್ ಕಿಚಡಿ ಮಾಡಿ ಸೇವಿಸಿ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಒಂದು ಬೌಲ್ ನಷ್ಟು ಓಟ್ಸ್ ನ್ನು ಸ್ವಲ್ಪ ನೀರಿನಲ್ಲಿ ಹಾಕಿ ನೀರು ಬಸಿದಿಡಿ

ಈಗ ಒಂದು ಬಾಣಲೆಯಲ್ಲಿ ಒಗ್ಗರಣೆ ಹಾಕಿ ಈರುಳ್ಳಿ, ಹಸಿಮೆಣಸು ಹಾಕಿ

ಇದು ಚೆನ್ನಾಗಿ ಫ್ರೈ ಆದ ಬಳಿಕ ಕ್ಯಾರೆಟ್, ಬೀನ್ಸ್, ಅರಿಶಿನ ಹಾಕಿ

ಇದು ಚೆನ್ನಾಗಿ ಫ್ರೈ ಆದ ಬಳಿಕ ತೊಳೆದುಕೊಂಡ ಓಟ್ಸ್ ಸೇರಿಸಿ

ಇದಕ್ಕೆ ಬೇಕಾಗುವಷ್ಟು ನೀರು ಹಾಕಿಕೊಂಡು ಬೇಯಲು ಬಿಡಿ

ಇದು ಚೆನ್ನಾಗಿ ಬೆಂದಾಗ ರುಚಿಗೆ ತಕ್ಕ ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿದರೆ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.