ದೇವಸ್ಥಾನ ಶೈಲಿಯ ಸಾರು ರೆಸಿಪಿ

ದಕ್ಷಿಣ ಕನ್ನಡ ಕಡೆ ದೇವಾಲಯಗಳಿಗೆ ಹೋದರೆ ಸಿಗುವ ಸಾರು ಘಂ ಎಂದು ಊಟವಾದ ಬಳಿಕವೂ ಕೈ ಪರಿಮಳ ಬರುತ್ತಿರುತ್ತದೆ. ಇದನ್ನು ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲಿಗೆ ಬಾಣಲೆಗೆ ಸ್ವಲ್ಪವೇ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ

ಇದಕ್ಕೆ 2 ಚಮಚ ಧನಿಯಾ, 1 ಚಮದ ಜೀರಿಗೆ, ಅರ್ಧ ಚಮದ ಮೆಂತೆ ಹಾಕಿ

ನಾಲ್ಕು ಒಣ ಮೆಣಸನ್ನೂ ಸೇರಿಸಿ ಚೆನ್ನಾಗಿ ಫ್ರೈ ಮಾಡಿ

ಇದು ಫ್ರೈ ಆಗುತ್ತಾ ಬರುವಾಗ ಸ್ವಲ್ಪ ಮಯಣದ ಇಂಗು ಸೇರಿಸಿ

ಈ ಮಿಶ್ರಣವನ್ನು ನೀರು ಹಾಕದೇ ರುಬ್ಬಿಟ್ಟುಕೊಳ್ಳಿ

ಈಗ ಬಾಣಲೆಯಲ್ಲಿ ಕತ್ತರಿಸಿ ಟೊಮೆಟೊವನ್ನು ಎಣ್ಣೆ ಹಾಕಿ ಫ್ರೈ ಮಾಡಿ

ಇದಕ್ಕೆ ಬೇಯಿಸಿದ ತೊಗರಿ ಬೇಳೆ, ರುಬ್ಬಿದ ಮಸಾಲೆ ಸೇರಿಸಿ ನೀರು ಹಾಕಿ

ಇದನ್ನು ಚೆನ್ನಾಗಿ ಕುದಿಸಿ ಕೊತ್ತಂಬರಿ ಸೊಪ್ಪು, ಬೆಲ್ಲ, ಉಪ್ಪು ಹಾಕಿದರೆ ಸಾರು ರೆಡಿ