ಕೇರಳ ಸ್ಟೈಲ್ ತೋರನ್ ಮಾಡುವುದು ಹೇಗೆ

ಕೇರಳ ಶೈಲಿಯ ಅಡುಗೆಯಲ್ಲಿ ತೋರನ್ ಎನ್ನುವ ಸೈಡ್ ಡಿಶ್ ಅತ್ಯಂತ ರುಚಿಕರ. ಇದನ್ನು ಪೂರಿ, ಚಪಾತಿಗೂ ಬಳಸಬಹುದು. ಇದನ್ನು ಮಾಡುವುದು ಹೇಗೆ ನೋಡಿ.

Photo Credit: Instagram

ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಜೀರಿಗೆ ಇತ್ಯಾದಿ ಹಾಕಿ ಒಗ್ಗರಣೆ ಕೊಡಿ

ಈಗ ಹೆಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ

ಇದು ಫ್ರೈ ಆಗುವಾಗ ಸ್ವಲ್ಪ ಅರಿಶಿನವನ್ನೂ ಸೇರಿಸಿಕೊಳ್ಳಿ

ಈಗ ಹೆಚ್ಚಿದ ಬೀನ್ಸ್ ಹಾಕಿ ಸ್ವಲ್ಪ ಉಪ್ಪು ಸೇರಿಸಿ ಬೇಯಲು ಬಿಡಿ

ಈಗ ಮಿಕ್ಸಿ ಜಾರ್ ಗೆ ಕಾಯಿತುರಿ, ಹಸಿಮೆಣಸು, ಜೀರಿಗೆ ಹಾಕಿ ನೀರು ಹಾಕದೇ ರುಬ್ಬಿ

ಇದನ್ನು ಬೆಂದ ಹೋಳಿಗೆ ಸೇರಿಸಿಕೊಂಡು ಚೆನ್ನಾಗಿ ಕಲಸಿಕೊಂಡರೆ ತೋರನ್ ರೆಡಿ

ಗಮನಿಸಿ: ಈ ವಿಧಾನ ವಿವಿಧ ಮೂಲಗಳನ್ನು ಆಧರಿಸಿದ್ದಾಗಿದೆ.