ಟಾಯ್ಲೆಟ್ ಕಮೋಡ್ ಬಿಳಿಯಾಗಲು 3 ವಸ್ತು ಸಾಕು

ಟಾಯ್ಲೆಟ್ ಕಮೋಡ್ ಗೆ ಅಂಗಡಿಯಲ್ಲಿ ಸಿಗುವ ಯಾವುದೇ ಕ್ಲೀನರ್ ಬಳಸಿದರೂ ಕಲೆ ಹೋಗುತ್ತಿಲ್ಲವೇ? ಹಾಗಿದ್ದರೆ ಮನೆಯಲ್ಲಿಯೇ ಇರುವ ಈ ಮೂರು ವಸ್ತು ಬಳಸಿ ಕ್ಲೀನ್ ಮಾಡಿ ನೋಡಿ.

Photo Credit: Instagram

ಒಂದು ಬೌಲ್ ಗೆ ಒಂದು ನಿಂಬೆ ಹಣ್ಣನ್ನು ಹಿಂಡಿ ರಸ ತೆಗೆದುಕೊಳ್ಳಿ

ಇದಕ್ಕೆ ಎರಡು ಸ್ಪೂನ್ ಆಗುವಷ್ಟು ಟೂತ್ ಪೇಸ್ಟ್ ಹಾಕಿ

ಬಳಿಕ ಒಂದು ಸ್ಪೂನ್ ನಷ್ಟು ಬೇಕಿಂಗ್ ಸೋಡಾ ಸೇರಿಸಿ

ಈಗ ಇದು ಚೆನ್ನಾಗಿ ನೊರೆ ಆಗುವವರೆಗೆ ಕಲಸಿಕೊಳ್ಳಿ

ಬಳಿಕ ಒಂದು ಲೀಟರ್ ನ ಸ್ಪ್ರೇ ಬಾಟಲಿಗೆ ಇದನ್ನು ಹಾಕಿ

ಇದಕ್ಕೆ ಬಾಟಲಿ ತುಂಬುವಷ್ಟು ನೀರು ಸೇರಿಸಿ ಚೆನ್ನಾಗಿ ಕುಲುಕಿ

ಈಗ ಟಾಯ್ಲೆಟ್ ಗೆ ಈ ದ್ರಾವಣವನ್ನು ಹಾಕಿ ಕ್ಲೀನ್ ಮಾಡಿ