ಟೊಮೆಟೊ ಬೆಳ್ಳುಳ್ಳಿ ಚಟ್ನಿ ಮಿಕ್ಸಿ ಇಲ್ಲದೇ ಮಾಡುವ ವಿಧಾನ

ಟೊಮೆಟೊ, ಬೆಳ್ಳುಳ್ಳಿ ಗಂರ ಚಟ್ನಿಯಿದ್ದರೆ ಸ್ವಲ್ಪ ಗಂಜಿ ಜೊತೆ ನೆಚ್ಚಿಕೊಂಡು ತಿನ್ನಲು ಅದ್ಭುತ ರುಚಿ. ಇದನ್ನು ತವಾದಲ್ಲಿ ಮಿಕ್ಸಿ ಬಳಸದೇ ಸುಲಭವಾಗಿ ಮಾಡುವುದು ಹೇಗೆ ನೋಡಿ.

Photo Credit: Instagram

ತವಾಗೆ ಎಣ್ಣೆ ಸವರಿ 2 ಟೊಮೆಟೊ, ನಾಲ್ಕೈದು ಹಸಿಮೆಣಸು, ಬೆಳ್ಳುಳ್ಳಿ ಹಾಕಿ

ಈಗ ಇದು ಬಿಸಿಯಾಗುತ್ತಿದ್ದಂತೇ ರುಚಿಗೆ ತಕ್ಕ ಉಪ್ಪು ಸೇರಿಸಿ

ಬಾಡಿದ ಮೇಲೆ ಟೊಮೆಟೊ ಎರಡು ಹೋಳು ಮಾಡಿ ತವಾದಲ್ಲಿಡಿ

ಎಲ್ಲವೂ ಚೆನ್ನಾಗಿ ಬಾಡಿಕೊಂಡು ಉಪ್ಪು ಹಿಡಿದಿರುತ್ತದೆ

ಈಗ ಒಂದು ಪಾತ್ರೆಯಿಂದ ಇದನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ

ಬಳಿಕ ಚಿಕ್ಕ ಉರಿಯಲ್ಲಿ ಚೆನ್ನಾಗಿ ಬಿಸಿ ಮಾಡಿ ಕೊತ್ತಂಬರಿ ಸೊಪ್ಪು ಹಾಕಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.