ನಾಗರಪಂಚಮಿಗೆ ಅರಿಶಿನ ಎಲೆ ಕಡುಬು ಮಾಡಿ

ಇಂದು ನಾಗರಪಂಚಮಿಯಾಗಿದ್ದ ದಕ್ಷಿಣ ಕನ್ನಡ ಶೈಲಿಯಲ್ಲಿ ಅರಿಶಿನ ಎಲೆಯಲ್ಲಿ ಸಿಹಿ ಕಡುಬು ಮಾಡಿ. ಇದು ಆರೋಗ್ಯಕ್ಕೂ ಉತ್ತಮ. ಮಾಡುವ ವಿಧಾನ ಇಲ್ಲಿದೆ.

Photo Credit: Instagram

ದೋಸೆ ಅಕ್ಕಿಯನ್ನು ನೆನೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಹಸಿ ತೆಂಗಿನ ಕಾಯಿ ತುರಿದಿಟ್ಟುಕೊಳ್ಳಿ

ಈಗ ಬೆಲ್ಲಪಾಕ ಮಾಡಿಕೊಂಡು ಕಾಯಿತುರಿಗೆ ಸೇರಿಸಿ

ಇದಕ್ಕೆ ಸ್ವಲ್ಪ ತುಪ್ಪವನ್ನೂ ಸೇರಿಸಿ ಚೆನ್ನಾಗಿ ಕಲಸಿ

ಈಗ ಅರಿಶಿನ ಎಲೆಯನ್ನು ತೊಳೆದು ಅಕ್ಕಿ ಹಿಟ್ಟಿಗೆ ಎಣ್ಣೆ ಸೇರಿಸಿ ಹಚ್ಚಿ

ಇದಕ್ಕೆ ಹೂರಣ ಹಾಕಿ ಮಡಚಿ ಹಬೆ ಪಾತ್ರೆಯಲ್ಲಿ ಬೇಯಿಸಿದರೆ ಕಡುಬು ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.