ಉದ್ದು, ಅಕ್ಕಿ ಬಳಸದೇ ತೂತು ವಡೆ ಮಾಡುವ ವಿಧಾನ

ಸಾಮಾನ್ಯವಾಗಿ ಉದ್ದಿನ ಹಿಟ್ಟು ಅಥವಾ ಉಳಿದ ಅನ್ನದಿಂದ ತೂತು ವಡೆ ಮಾಡುತ್ತಾರೆ. ಆದರೆ ಇದೆರಡೂ ಇಲ್ಲದೇ ಕ್ರಿಸ್ಪಿಯಾಗಿರುವ ತೂತು ವಡೆ ಮಾಡುವುದು ಹೇಗೆ ನೋಡಿ.

Photo Credit: Instagram

ಒಂದು ಬಾಣಲೆಯಲ್ಲಿ ನೀರು ಕುದಿಸಿ ಚಿಲ್ಲಿ ಫ್ಲೇಕ್ಸ್, ಉಪ್ಪು ಸೇರಿಸಿ

ಇದಕ್ಕೆ ಹುರಿದ ರವೆಯನ್ನು ಹಾಕಿ ಸೌಟು ಆಡಿಸುತ್ತಾ ಇರಿ

ಇದು ಗಟ್ಟೆಯಾದಾಗ ತಟ್ಟೆಗೆ ಹಾಕಿ ಕಲಸಿಕೊಳ್ಳಿ

ಈಗ ಉಂಡೆ ಕಟ್ಟಿ ವಡೆಯಂತೆ ತಟ್ಟಿ ಮಧ್ಯೆ ಉಂಡೆ ಮಾಡಿ

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಲು ಇಡಿ

ಇದಕ್ಕೆ ವಡೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ

ಹೊಂಬಣ್ಣ ಬರುವಾಗ ಹೊರತೆಗೆದರೆ ಕ್ರಿಸ್ಪಿ ವಡೆ ಸಿದ್ಧ