ತಲೆಕೂದಲಿನ ಸಮಸ್ಯೆ ಪರಿಹಾರಕ್ಕೆ ಕರಿಬೇವಿನ ಎಣ್ಣೆ ಅತ್ಯುತ್ತಮವಾದ ಪರಿಹಾರ ನೀಡಬಲ್ಲದು. ಇಂದು ಫ್ರೆಶ್ ಕರಿಬೇವಿನ ಎಲೆಗಳನ್ನು ಬಳಸಿಕೊಂಡು ತಲೆಕೂದಲಿಗೆ ಹಚ್ಚಿಕೊಳ್ಳಲು ಎಣ್ಣೆ ಮಾಡುವುದು ಹೇಗೆ ಎಂದು ನೋಡೋಣ.
Photo Credit: Social Media
ಕರಿಬೇವಿನ ಫ್ರೆಶ್ ಎಲೆಗಳು 10-15 ಮತ್ತು ಕೊಬ್ಬರಿ ಎಣ್ಣೆ ಒಂದು ಬೌಲ್ ನಷ್ಟು ಇಟ್ಟುಕೊಳ್ಳಿ.
ಮೊದಲು ಒಂದು ಬಾಣಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಿ
ಎಣ್ಣೆ ಚೆನ್ನಾಗಿ ಕುದಿ ಬರುವಷ್ಟು ಬಿಸಿಯಾಗುವಾಗ ಫ್ರೆಶ್ ಆಗಿರುವ ಕರಿಬೇವಿನ ಎಲೆ ಹಾಕಿ
ಕರಿಬೇವಿನ ಎಲೆ ಎಣ್ಣೆಯಲ್ಲಿ ಚೆನ್ನಾಗಿ ಕುದಿದು ರಸ ಬಿಟ್ಟ ಬಳಿಕ ಬೆಂಕಿ ಆರಿಸಿ
ಎಣ್ಣೆ ಕೊಂಚ ತಣ್ಣಗಾದ ಬಳಿಕ ಅದರಿಂದ ಕರಿಬೇವಿನ ಕಸವನ್ನು ಬೇರ್ಪಡಿಸಿ ಬಾಟಲಿಯಲ್ಲಿ ಹಾಕಿಡಿ
ಈ ಎಣ್ಣೆಯನ್ನು ಎರಡು ದಿನಕ್ಕೊಮ್ಮೆ ತಲೆ ಕೂದಲುಗಳಿಗೆ ಚೆನ್ನಾಗಿ ಹಾಕಿ ಮಸಾಜ್ ಮಾಡುತ್ತಿರಿ
ಇದರಿಂದ ತಲೆ ಕೂದಲು ಉದುರುವಿಕೆ, ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತವೆ