ಒಂಚೂರೂ ಉದ್ದು ಬಳಸದೇ ಕ್ರಿಸ್ಪಿ ದೋಸೆ ಮಾಡಿ

ಉದ್ದಿನ ಬೇಳೆ ಬಳಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಾಗುತ್ತಿದೆ ಎಂದರೆ ಉದ್ದು ಬಳಸದೇ ಮಾಡುವ ಈ ಕ್ರಿಸ್ಪಿ ದೋಸೆ ಮಾಡಿ ನೋಡಿ.

Photo Credit: Instagram

ಮೊದಲು ದೋಸೆ ಅಕ್ಕಿಯನ್ನು ನಾಲ್ಕು ಗಂಟೆ ನೆನೆ ಹಾಕಿ

ಇದಕ್ಕೆ ನಾಲ್ಕು ಸೌಟು ಮಜ್ಜಿಗೆ, ನೀರು ಸೇರಿಸಿ ಮಿಕ್ಸಿಗೆ ಹಾಕಿ

ಒಂದು ಕಪ್ ಅವಲಕ್ಕಿಯನ್ನು ತೊಳೆದು ಇದಕ್ಕೆ ಸೇರಿಸಿ

ಇವಿಷ್ಟನ್ನೂ ನುಣ್ಣಗೆ ರುಬ್ಬಿಕೊಂಡು ಉಪ್ಪು ಹಾಕಿಡಿ

ಇದನ್ನು ಒಂದು ರಾತ್ರಿ ಹುಳಿ ಬರಲು ಇಟ್ಟರೆ ಹಿಟ್ಟು ಚೆನ್ನಾಗಿ ಬರುತ್ತದೆ

ಮಾರನೆ ದಿನ ದೋಸೆ ತವಾಗೆ ಎಣ್ಣೆ ಹಾಕದೇ ದೋಸೆ ಹುಯ್ದುಕೊಳ್ಳಿ

ಇದನ್ನು ಸೆಟ್ ದೋಸೆಯ ರೀತಿಯೂ ಹುಯ್ದುಕೊಳ್ಳಬಹುದು