ಕೂದಲು ಬೆಳವಣಿಗೆಗೆ ಬೆಸ್ಟ್ ಹೇರ್ ಆಯಿಲ್ ರೆಸಿಪಿ

ಕೂದಲು ಬೆಳವಣಿಗೆಯಾಗಲು ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಸುಲಭವಾಗಿ ಎಣ್ಣೆ ತಯಾರಿಸಿಕೊಳ್ಳಬಹುದು. ಹೇಗೆ ಇಲ್ಲಿ ನೋಡಿ.

Photo Credit: Instagram

ಮೊದಲು ಬಾಣಲೆ ಬಿಸಿ ಮಾಡಿ ಅದಕ್ಕೆ ಮೆಂತೆ, ಕಪ್ಪು ಎಳ್ಳು ಹಾಕಿ ಫ್ರೈ ಮಾಡಿ

ಇವೆರಡನ್ನೂ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ

ಈಗ ಬಾಣಲೆಗೆ ಒಂದು ಬಟ್ಟಲು ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ

ಇದು ಹದ ಬಿಸಿಯಾಗುವಾಗ ಅರ್ಧ ಬಟ್ಟಲು ಹರಳೆಣ್ಣೆ ಸೇರಿಸಿ

ಇದು ಚೆನ್ನಾಗಿ ಕುದಿ ಬರುವಾಗ ಸ್ವಲ್ಪ ದಾಸವಾಳದ ಎಲೆ ಹಾಕಿ

ಕುದಿ ಬಂದ ಮೇಲೆ ಮೆಂತೆ, ಎಳ್ಳಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ

ಇದನ್ನು ಸೋಸಿ ಎರಡು ದಿನಕ್ಕೊಮ್ಮೆ ಹಚ್ಚಿಕೊಳ್ಳುತ್ತಿದ್ದರೆ ಕೂದಲಿಗೆ ಉತ್ತಮ