ಇತ್ತೀಚೆಗಿನ ದಿನಗಳಲ್ಲಿ ಚಿಕ್ಕವಯಸ್ಸಿಗೇ ಹೃದಯಾಘಾತವಾಗಿ ಜನರು ಪ್ರಾಣ ಕಳೆದುಕೊಳ್ಳುವಂತಹ ಎಷ್ಟೋ ನಿದರ್ಶನಗಳನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಹಾಗಿದ್ದರೆ ಚಿಕ್ಕ ವಯಸ್ಸಿಗೇ ಹೃದಯಾಘಾತವಾಗದಂತೆ ತಡೆಯಲು ಏನು ದಾರಿ?
credit: social media
ನಮ್ಮ ಜೀವನ ಶೈಲಿಯೇ ಹೃದಯಾಘಾತಕ್ಕೆ ಮುಖ್ಯ ಕಾರಣವಾಗುತ್ತದೆ ಎಂಬುದು ನೆನಪಿರಲಿ.
ಅತಿಯಾದ ಒತ್ತಡ, ಟೆನ್ಷನ್ ನಿಂದಾಗಿ ರಕ್ತದೊತ್ತಡ ಹೆಚ್ಚಾಗದಂತೆ ನೋಡಿಕೊಳ್ಳಿ
ನಿಯಂತ್ರಣವಿಲ್ಲದೇ ಆಹಾರ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಹೆಚ್ಚದಂತೆ ನೋಡಿಕೊಳ್ಳಿ
ನಿಯಮಿತವಾಗಿ ಚೆಕ್ ಅಪ್ ಮಾಡಿಕೊಂಡು, ಮಧುಮೇಹವಿಲ್ಲ ಎಂಬುದನ್ನು ಖಚಿತಪಡಿಸಿ.
ದಿನವಿಡೀ ಒಂದೇ ಕಡೆ ಕೂರುವ ಬದಲು ದೇಹಕ್ಕೆ ಚಟುವಟಿಕೆ ನೀಡಿ.
ಹೃದಯಾಘಾತಕ್ಕೆ ಬೊಜ್ಜು ಕೂಡಾ ಕಾರಣವಾಗುವ ಕಾರಣ ದೇಹ ತೂಕದ ಮೇಲೆ ಗಮನವಿರಲಿ
ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಹ, ಮನಸ್ಸಿಗೆ ಸಂತೋಷ ಕೊಡುವ ಕೆಲಸ ಮಾಡುವುದು ಮುಖ್ಯ.