ಒಲೆ ಮೇಲಿಟ್ಟ ಹಾಲು ಉಕ್ಕಿ ಚೆಲ್ಲದಂತೆ ತಡೆಯಲು ಟಿಪ್ಸ್

ಒಲೆ ಮೇಲೆ ಹಾಲು ಇಟ್ಟಿದ್ದೇವೆ ಎಂದು ನೆನಪಿಲ್ಲದೇ ಉಕ್ಕಿ ಬಂದು ಸ್ಟೌವ್ ಮೇಲೆಲ್ಲಾ ಚೆಲ್ಲಿ ಅನರ್ಥವಾಗುತ್ತದೆ. ಹಾಲು ಉಕ್ಕಿ ಚೆಲ್ಲದಂತೆ ನೋಡಿಕೊಳ್ಳಲು ಈ ಕೆಲವು ಟಿಪ್ಸ್ ಬಳಸಿ.

Photo Credit: WD

ಹಾಲು ಕಾಯಿಸುವಾಗ ಆದಷ್ಟು ಅಗಲವಾದ ಪಾತ್ರೆಯಲ್ಲಿ ಕುದಿಸಲು ಇಡಿ

ಹೆಚ್ಚು ಕಡಿದಾದ ಉದ್ದ ಪಾತ್ರೆಯಲ್ಲಿ ಕುದಿಸಿದರೆ ಹಾಲು ಚೆಲ್ಲುವ ಸಾಧ್ಯತೆ ಹೆಚ್ಚು

ಹಾಲಿನ ಪಾತ್ರೆಯ ಮೇಲೆ ಒಂದು ಶುದ್ಧವಾದ ಮರದ ಸೌಟನ್ನು ಇಟ್ಟಲ್ಲಿ ಉಕ್ಕಿ ಬರುವುದಿಲ್ಲ.

ಹಾಲು ಕುದಿಸುವಾಗ ಉರಿ ಮಧ್ಯಮವಾಗಿದ್ದರೆ ಬೇಗನೇ ಉಕ್ಕಿ ಚೆಲ್ಲುವುದಿಲ್ಲ

ಹಾಲು ಬಿಸಿಯಾಗಿ ಕೆನೆ ಬರುತ್ತಿದ್ದಂತೇ ಒಮ್ಮೆ ಸೌಟು ಹಾಕಿ ಆಡಿಸಿದರೆ ಚೆಲ್ಲುವುದಿಲ್ಲ

ಹಾಲು ಕುದಿಯುವ ಪಾತ್ರೆಗೆ ಒಂದು ಸೌಟು ಹಾಕಿಟ್ಟರೆ ಅದು ಮೇಲೆ ಬಂದರೂ ಚೆಲ್ಲುವುದಿಲ್ಲ

ಹಾಲು ಕೆನೆಗಟ್ಟಿದ ಕೂಡಲೇ ಕೆನೆಯ ಪದರ ಚದುರಿಸಿದರೆ ಚೆಲ್ಲುವುದು ತಪ್ಪುತ್ತದೆ