ಮಳೆಗಾಲದಲ್ಲಿ ಉಪ್ಪು ಡಬ್ಬದಲ್ಲೇ ತನ್ನಿಂದ ತಾನೇ ನೀರು ನೀರಾಗಿ ಬಿಡುತ್ತದೆ. ಇದರಿಂದ ಅದನ್ನು ಉಪಯೋಗಿಸಲೂ ಕಷ್ಟ. ಆದರೆ ತೇವಾಂಶ ಬಿಟ್ಟು ಉಪ್ಪು ನೀರು ನೀರಾಗುವುದನ್ನು ತಡೆಯಲು ಏನು ಮಾಡಬೇಕು ಇಲ್ಲಿ ನೋಡಿ.
Photo Credit: AI image, WD
ಉಪ್ಪು ಶೇಖರಿಸುವಾಗ ಆದಷ್ಟು ಗಾಜಿನ ಪಾತ್ರೆಯಲ್ಲೇ ಹಾಕಿಡಿ
ಉಪ್ಪು ಹಾಕಿಡುವ ಪಾತ್ರೆಯನ್ನು ತೊಳೆದು ಬಿಸಿಲಿಗೆ ಒಣ ಹಾಕಿ ತೇವಾಂಶ ಇಲ್ಲದಂತೆ ನೋಡಿಕೊಳ್ಳಿ
ಉಪ್ಪಿನ ಪಾತ್ರೆಯನ್ನು ಆದಷ್ಟು ಬೆಚ್ಚಗಿರುವ ಸ್ಥಳದಲ್ಲೇ ಇಟ್ಟುಕೊಳ್ಳುವುದು ಉತ್ತಮ
ಉಪ್ಪು ತೆಗೆಯಲು ಪಾತ್ರೆಗೆ ಕೈ ಹಾಕುವಾಗ ಅಂಗೈ ತೇವಾಂಶವಿಲ್ಲದಂತೆ ನೋಡಿಕೊಳ್ಳಿ
ಉಪ್ಪು ಹಾಕಿಡುವ ಪಾತ್ರೆಗೆ ಒಂದೆರಡು ಲವಂಗ ಹಾಕಿಡುವುದರಿಂದ ತೇವಾಂಶ ಹೀರಿಕೊಳ್ಳುತ್ತದೆ
ಉಪ್ಪಿನ ಪಾತ್ರೆಗೆ ಕೆಲವು ಕಾಫಿ ಬೀಜಗಳನ್ನು ಹಾಕಿಡುವುದರಿಂದ ತೇವಾಂಶ ಬಿಡುವುದಿಲ್ಲ
ಉಪ್ಪಿನ ಪಾತ್ರೆಗೆ ನೀರು ಅಥವಾ ನೀರಿನಂಶ ಬೀಳದಂತೆ ನೋಡಿಕೊಂಡರೆ ಉತ್ತಮ