ಚಳಿಗಾಲದಲ್ಲಿ ಮೈ ಕೈ ನೋವು ಬಾರದಂತೆ ಎಲುಬುಗಳನ್ನು ಸಂರಕ್ಷಿಸುವುದು ಹೇಗೆ?
ಚಳಿಗಾಲ ಬಂತೆಂದರೆ ಸಾಕು, ಮೈ ಕೈ ನೋವು ಬರುವುದು ಸಹಜ. ಆದರೆ ಚಳಿಗಾಲದಲ್ಲಿ ನಿಮ್ಮ ಎಲುಬುಗಳನ್ನು ಗಟ್ಟಿಗೊಳಿಸಿ ಮೈ ಕೈ ನೋವು ಬಾರದಂತೆ ತಡೆಯಲು ಕೆಲವೊಂದು ಉಪಾಯ ಮಾಡಿನೋಡಬಹುದು. ಅವು ಯಾವುವು ನೋಡೋಣ.
credit: social media
ಚಳಿಗಾಲದಲ್ಲಿ ಬಿಸಿಲಿಗೆ ಮೈ ಕಾಯಿಸಿಕೊಳ್ಳಿ. ಎಳೆ ಬಿಸಿಲು ಮೈಗೆ ಬಿದ್ದರೆ ವಿಟಮಿನ್ ಡಿ ಅಂಶ ಹೀರಿಕೊಂಡು ಎಲುಬು ಗಟ್ಟಿಯಾಗುತ್ತದೆ.
ಎಳೆ ಬಿಸಿಲು ಬರುವಾಗ ಸಣ್ಣದೊಂದು ವಾಕ್ ಮಾಡಿದರೂ ಉತ್ತಮ
ನಿಮ್ಮ ಆಹಾರವೂ ಸರಿಯಾದ ಕ್ರಮದಲ್ಲಿರುವುದು ಅವಶ್ಯಕ. ಸಮತೋಲಿತ ಆಹಾರ ಸೇವಿಸಬೇಕು
ಡೈರಿ ಉತ್ಪನ್ನಗಳು, ಸೊಪ್ಪು ತರಕಾರಿಗಳು ಆಹಾರದಲ್ಲಿ ಹೆಚ್ಚು ಬಳಸಿ
ಚಳಿಗಾಲದಲ್ಲಿ ಬಾಯಾರಿಕೆಯಾಗುವುದಿಲ್ಲ ಎಂದು ನೀರು ಸೇವಿಸದೇ ಇರಬೇಡಿ.
ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುವುದು ಮುಖ್ಯ.
ಸಂಜೆ ವೇಳೆಗೆ ಹೊರಗೆ ಆಟವಾಡುವುದು ಅಥವಾ ಯಾವುದೇ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ