ಬೇಸಿಗೆಯಲ್ಲಿ ಕಣ್ಣಿನ ಸಂರಕ್ಷಣೆ ಮಾಡಲು ಉಪಾಯ

ಬೇಸಿಗೆಯ ಸುಡು ಬಿಸಿಲಿಗೆ ಹೊರಗೆ ಹೋದರೆ ಕಣ್ಣು ಕಪ್ಪಾಗುವುದು, ಮಂಜಾದಂತೆ ಅನಿಸುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತದೆ. ಅಲ್ಲದೆ, ಬೇಸಿಗೆಯಲ್ಲಿ ಕಣ್ಣುರಿ, ಅಲರ್ಜಿ ಇತ್ಯಾದಿ ಸಮಸ್ಯೆ ಬರಬಹುದು. ಬೇಸಿಗೆಯಲ್ಲಿ ಕಣ್ಣು ಸಂರಕ್ಷಣೆ ಮಾಡಲು ಉಪಾಯಗಳೇನು ನೋಡೋಣ.

credit: social media

ಬಿಸಿಲಿಗೆ ಓಡಾಡುವಾಗ ಸನ್ ಗ್ಲಾಸ್ ಅಥವಾ ಮಾಮೂಲಿ ಕನ್ನಡಕ ಬಳಸಿ

ಮನೆಗೆ ಬಂದ ತಕ್ಷಣ ತಂಪು ನೀರಿನಿಂದ ಕಣ್ಣು ತೊಳೆದುಕೊಳ್ಳಲು ಮರೆಯದಿರಿ

ಆದಷ್ಟು ಚರ್ಮ ಮತ್ತು ಕಣ್ಣು ಹೈಡ್ರೇಟ್ ಆಗಿರುವಂತೆ ನೀರಿನಂಶ ಸೇವಿಸಿ.

ಮಧ್ಯಾುಹ್ನದ ಉರಿಬಿಸಿಲಿಗೆ ನಡೆದಾಡುವುದನ್ನು ಆದಷ್ಟು ತಪ್ಪಿಸಿಕೊಂಡರೆ ಉತ್ತಮ

ಕಣ್ಣು ಮುಖಕ್ಕೆ ನೆರಳು ಬೀರುವಂತಹ ಟೋಪಿಗಳನ್ನು ಧರಿಸಿಕೊಳ್ಳಿ.

ಕಣ್ಣಿಗೆ ಒದ್ದೆ ಬಟ್ಟೆ ಅಥವಾ ಸೌತೆಕಾಯಿಯನ್ನು ಇಟ್ಟುಕೊಂಡು ಕೆಲವು ಕ್ಷಣ ತಂಪು ಮಾಡಿ

ಬಿಸಿಲಿಗೆ ಓಡಾಡಬೇಕಾದ ಸಂದರ್ಭ ಬಂದರೆ ಮನೆಗೆ ಬಂದ ತಕ್ಷಣ ಕಣ್ಣಿಗೆ ವಿಶ್ರಾಂತಿ ನೀಡಿ.