ಅಡುಗೆ ಮಾಡುವಾಗ ಉಪ್ಪು-ಖಾರ ಹೆಚ್ಚು ಕಮ್ಮಿಯಾಗುವುದು ಸಹಜ. ಕೆಲವೊಮ್ಮೆ ಉಪ್ಪಿನಂಶ ಹೆಚ್ಚಾಗಿ ಏನು ಮಾಡೋದು ಅಂತ ಗೊತ್ತೇ ಆಗೋದಿಲ್ಲ. ಇಂತಹ ಸಂದರ್ಭದಲ್ಲಿ ಉಪ್ಪಿನ ಅಂಶ ಸರಿಪಡಿಸಲು ಈ ಕೆಲವು ಟಿಪ್ಸ್ ಪಾಲಿಸಿ.
Photo Credit: Instagram, AI image
ಸಾಂಬಾರ್, ರಸಂ ಮಾಡುವಾಗ ಉಪ್ಪು ಹೆಚ್ಚಾದರೆ ಅದನ್ನು ಸರಿಪಡಿಸಲು ಉಪಾಯಗಳಿವೆ
ಸಾಂಬಾರ್ ಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಬೇಯಿಸಿ ಕಿವುಚಿ ಹಾಕಿ
ಸಾಂಬಾರ್, ರಸಂಗೆ ಉಪ್ಪು ಹೆಚ್ಚಾಗಿದ್ದರೆ ಸ್ವಲ್ಪ ನೀರು, ಬೆಲ್ಲ ಸೇರಿಸಿ
ಸ್ವಲ್ಪ ತೊಗರಿಬೇಳೆ ಬೇಯಿಸಿ ಹಾಕಿದರೆ ಉಪ್ಪು ಹೆಚ್ಚಾಗಿರುವುದು ಹದಕ್ಕೆ ಬರುತ್ತದೆ
ಗ್ರೇವಿ ಮಾಡಿದ್ದರೆ ಅದಕ್ಕೆ ಸ್ವಲ್ಪ ಕಡಲೆ ಹಿಟ್ಟು ಸೇರಿಸಿದರೆ ಉಪ್ಪು ಹದಕ್ಕೆ ಬರಬಹುದು
ಸಾಂಬಾರ್ ಆಗಿದ್ದಲ್ಲಿ ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ನೀರು ಹಾಕಿ ತಿರುವಿಕೊಳ್ಳಿ
ರಸಂಗೆ ಉಪ್ಪು ಹೆಚ್ಚಾಗಿದ್ದರೆ ಸ್ವಲ್ಪ ಟೊಮೆಟೊವನ್ನು ಕಡೆದು ಪ್ಯೂರಿ ಮಾಡಿ ಸೇರಿಸಬಹುದು