ಬೀಟ್ ರೂಟ್ ಕತ್ತರಿಸಿದಾಗ ಕೈ ಕೆಂಪಾದರೆ ಇಲ್ಲಿದೆ ಉಪಾಯ

ಬೀಟ್ ರೂಟ್ ಕತ್ತರಿಸಿದಾಗ ಅಂಗೈ ಇಡೀ ರಕ್ತ ಮೆತ್ತಿದಂತೆ ಕೆಂಪಗಾಗಿಬಿಡುತ್ತದೆ. ಇದು ಸಾಮಾನ್ಯವಾಗಿ ನೀರು ಹಾಕಿ ತೊಳೆದರೂ ಹೋಗಲ್ಲ. ಇದಕ್ಕೆ ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: WD

ಬೀಟ್ ರೂಟ್ ಕತ್ತರಿಸಿದ ಬಳಿಕ ಕೈ ಕೆಂಪು ಬಣ್ಣಕ್ಕೆ ತಿರುಗುತ್ತದೆ

ಬೀಟ್ ರೂಟ್ ನಲ್ಲಿರುವ ಕಡು ಕೆಂಪು ಬಣ್ಣ ಕೈಗೆ ಅಂಟಿದರೆ ಸುಲಭವಾಗಿ ಹೋಗುವುದಿಲ್ಲ

ಕೈಯಲ್ಲಿ ಕೆಂಪು ಬಣ್ಣದ ಕಲೆಯಾಗುವುದರಿಂದ ಕೈ ಅಸಹ್ಯವಾಗಿ ಕಾಣಬಹುದು

ಇದಕ್ಕಾಗಿ ಬೀಟ್ ರೂಟ್ ಕತ್ತರಿಸಿದ ಬಳಿಕ ಮೊದಲು ಕೈಗೆ ಕೊಂಚ ಮಜ್ಜಿಗೆ ಹಾಕಿ

ಕೈಗೆ ಮಜ್ಜಿಗೆ ಹಾಕಿ ಸುಮಾರು ಎರಡು ನಿಮಿಷ ಕೈಗಳನ್ನು ಚೆನ್ನಾಗಿ ಉಜ್ಜಿಕೊಳ್ಳಿ

ಬಳಿಕ ಸ್ವಲ್ಪ ಸೋಪ್ ನೀರನ್ನು ಹಾಕಿ ಕೈಯನ್ನು ಚೆನ್ನಾಗಿ ನೀರಿನಿಂದ ತೊಳೆದುಕೊಳ್ಳಿ

ಇದರಿಂದ ಕೈಯಲ್ಲಿರುವ ಕೆಂಪು ಬಣ್ಣ ಹೋಗಿ ಕೈ ಮೊದಲಿನಂತೆ ಶುದ್ಧವಾಗುತ್ತದೆ