ಹಾಗಲಕಾಯಿ ಕಹಿ ತೆಗೆಯಲು ಇಲ್ಲಿದೆ ಟಿಪ್ಸ್

ಹಾಗಲಕಾಯಿ ಎಂದರೆ ಕಹಿ ಎಂದು ಮುಖ ಕಿವುಚಿಕೊಳ್ಳುವವರೇ ಹೆಚ್ಚು. ಆದರೆ ಹಾಗಲಕಾಯಿಯಿಂದ ಕಹಿ ಅಂಶ ತೆಗೆಯಲು ಇಲ್ಲಿದೆ ಕೆಲವು ಅಮೂಲ್ಯ ಟಿಪ್ಸ್.

Photo Credit: Instagram, Facebook

ಹಾಗಲಕಾಯಿಯನ್ನು ಆದಷ್ಟು ಎಳೆಯದನ್ನು ನೋಡಿ ಮಾರುಕಟ್ಟೆಯಿಂದ ತರಬೇಕು

ಬಿಳಿ ಬಣ್ಣದ ಹಾಗಲಕಾಯಿಯಲ್ಲಿ ಕಹಿ ಅಂಶ ಕಡಿಮೆಯಾಗಿರುತ್ತದೆ

ಹಾಗಲಕಾಯಿ ಕತ್ತರಿಸಿದ ಬಳಿಕ ಕೆಲವು ಸಮಯ ಉಪ್ಪಿನಲ್ಲಿ ಹಾಕಿಡಿ

ಉಪ್ಪು ನೀರು ಬಿಟ್ಟ ಬಳಿಕ ಕೈಯಿಂದ ಚೆನ್ನಾಗಿ ಹಿಂಡಿ ನೀರಿನಂಶ ತೆಗೆಯಿರಿ

ಹಾಗಲಕಾಯಿ ಕತ್ತರಿಸಿ ಅದಕ್ಕೆ ಸ್ವಲ್ಪ ಅರಿಶಿನ ಪುಡಿ, ನೀರು ಹಾಕಿ ಕುದಿಸಿ

ಬಳಿಕ ಈ ನೀರು ತೆಗೆದು ಕೈಯಿಂದ ಹಿಂಡಿ ನೀರು ತೆಗೆದರೂ ಕಹಿ ಹೋಗುತ್ತದೆ

ಇಲ್ಲವೇ ಹಾಗಲಕಾಯಿಯನ್ನು ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ಕಹಿ ಅಂಶ ಹೋಗುತ್ತದೆ