ಅಡುಗೆ ಮನೆಯಲ್ಲಿ ಕೆಲವು ದಿನ ಬಳಸದೇ ಹಾಗೇ ಬಿಟ್ಟ ಚಾಕು ಅಥವಾ ಚೂರಿಯಂತಹ ಕಬ್ಬಿಣದ ವಸ್ತುಗಳು ಅಲ್ಲಿಗೇ ತುಕ್ಕು ಹಿಡಿದು ಉಪಯೋಗಿಸಲು ಸಾಧ್ಯವಾಗದಂತಾಗುತ್ತದೆ. ತುಕ್ಕು ಹಿಡಿದ ಚಾಕು ಸರಿಪಡಿಸುವುದು ಹೇಗೆ ನೋಡಿ.
Photo Credit: Instagram
ಚಾಕುವನ್ನು ತುಂಬಾ ಸಮಯದವರೆಗೆ ಉಪಯೋಗಿಸದೇ ಇದ್ದರೆ ತುಕ್ಕು ಹಿಡಿಯಬಹುದು
ಚಾಕು ತೊಳೆದ ನಂತರ ನೀರು ಸರಿಯಾಗಿ ಒರೆಸದೇ ಹಾಗೇ ಇಟ್ಟಲ್ಲಿ ತುಕ್ಕು ಹಿಡಿಯಬಹುದು
ಚಾಕು ಉಪಯೋಗಿಸಿದ ಬಳಿಕ ತೊಳೆದು ಟಿಶ್ಯೂ ಅಥವಾ ಬಟ್ಟೆಯಿಂದ ನೀರು ಒರೆಸಿಡಿ
ನಿತ್ಯವೂ ಬಳಸುವ ಚಾಕುವಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿಟ್ಟರೆ ಅದು ತುಕ್ಕಾಗದು
ಆಲೂಗಡ್ಡೆಯ ಹೋಳಿನಿಂದ ಚಾಕು ಮಸಾಜ್ ಮಾಡಿದರೆ ತುಕ್ಕು ಬಾರದು
ಬೇಕಿಂಗ್ ಸೋಡಾ ಪೇಸ್ಟ್ ನ್ನು ಚಾಕುವಿಗೆ ಹಾಕಿ ತೊಳೆದರೆ ತುಕ್ಕು ಹೋಗುತ್ತದೆ
ಕೆಲವು ಹೊತ್ತು ವಿನೇಗರ್ ದ್ರಾವಣದಲ್ಲಿ ಚಾಕು ಮುಳುಗಿಸಿಟ್ಟರೆ ತುಕ್ಕು ಮಾಯವಾಗುತ್ತದೆ