ಬಿಳಿ ಬಟ್ಟೆ ಹಾಕಿಕೊಂಡಾಗ ಬಟ್ಟೆ ಮೇಲೆ ಪಾನೀಯವೋ, ಆಹಾರ ವಸ್ತುವೋ ಇನ್ನೇನು ಬಣ್ಣವೋ ಬಿದ್ದು ಕಲೆ ಆದಾಗ ಅದನ್ನು ತೆಗೆಯುವುದು ಹೇಗೆ ಎಂಬ ಚಿಂತೆಯಾಗುತ್ತದೆ. ಬಿಳಿ ಬಟ್ಟೆಯಿಂದ ಕಲೆ ತೆಗೆಯಲು ಇಲ್ಲಿದೆ ಉಪಾಯ.
Photo credit: Instagram
ತಂಪು ನೀರಿನಲ್ಲಿ ಅದ್ದಿದ ಬಟ್ಟೆ ಬಳಸಿ ಕಲೆ ಇರುವ ಜಾಗದಲ್ಲಿ ನಿಧಾನವಾಗಿ ಉಜ್ಜಿ.
ಆಹಾರ ಪದಾರ್ಥದ ಕಲೆಯಾಗಿದ್ದರೆ ತೆಳುವಾದ ಚಾಕು ಅಥವಾ ಅಂತಹ ವಸ್ತು ಬಳಸಿ ಉಜ್ಜಿ
ಜೋಳದ ಗಂಜಿ ಬಳಸಿ ಕಲೆ ಇರುವ ಜಾಗವನ್ನು ತೊಳೆದುಕೊಳ್ಳಿ.
ಹೈಡ್ರೋಜನ್ ಪೆರಾಕ್ಸೈಡ್, ನಿಂಬೆ ರಸ ಅಥವಾ ವಿನೇಗರ್ ಮಿಕ್ಸ್ ಮಾಡಿ ಹದ ಬಿಸಿ ನೀರಿನಲ್ಲಿ ಬಟ್ಟೆ ಹಾಕಿಡಿ.
ಕಲೆಯಾದ ತಕ್ಷಣ ಬಾರ್ ಸೋಪ್ ನಲ್ಲಿ ತೊಳೆಯಬೇಡಿ
ಬಟ್ಟೆಯನ್ನು ಅತಿಯಾದ ಬಿಸಿ ನೀರಿನಲ್ಲಿ ಹಾಕುವುದು ಅಥವಾ ಕಲೆಯಾದ ತಕ್ಷಣವೇ ಇಸ್ತ್ರಿ ಹಾಕುವುದು ಮಾಡಬೇಡಿ.
ಕಲೆಯಾದ ತಕ್ಷಣ ತೊಳೆಯಬೇಕು. ಹೆಚ್ಚು ಹೊತ್ತು ಹಾಗೆಯೇ ಬಿಟ್ಟರೆ ಕಲೆ ಹೋಗದು.