ಹಾಳಾದ ಲೈಟ್ ಬಲ್ಬ್ ಹೀಗೆ ಮರುಬಳಕೆ ಮಾಡಿ

ಮನೆಯಲ್ಲಿ ಬಳಕೆ ಮಾಡುವ ಲೈಟ್ ಬಲ್ಬ್ ಗಳು ಕೆಲವು ಸಮಯದ ನಂತರ ಹಾಳಾಗುತ್ತವೆ. ಸಾಮಾನ್ಯವಾಗಿ ಈ ರೀತಿ ಹಾಳಾದ ಬಲ್ಬ್ ಗಳನ್ನು ಬಿಸಾಕಿ ಬಿಡುತ್ತೇವೆ. ಆದರೆ ಅದೇ ಬಲ್ಬ್ ಗಳನ್ನು ಯಾವ ರೀತಿ ಮರು ಬಳಕೆ ಮಾಡಬಹುದು ಇಲ್ಲಿ ನೋಡಿ.

Photo Credit: Instagram

ಪಾರದರ್ಶಕ ಲೈಟ್ ಬಲ್ಬ್ ಗಳು ಹಾಳಾದಾಗ ಹಿಂದಿನ ಭಾಗ ತೆರೆದು ಒಳಗಿನ ತಂತಿಗಳನ್ನು ಕಿತ್ತು ಖಾಲಿ ಮಾಡಿ

ಈಗ ಅದರೊಳಗೆ ಬಣ್ಣದ ನೀರು ತುಂಬಿಸಿ ಗಾರ್ಡನ್ ಅಥವಾ ಬಾಲ್ಕನಿಯಲ್ಲಿ ಹ್ಯಾಂಗಿಂಗ್ ಮಾಡಬಹುದು

ಹಾಳಾದ ಬಲ್ಬ್ ನ ಒಳಗೆ ನೀರು ತುಂಬಿ ಚಿಕ್ಕ ಮೀನು ಬಿಟ್ಟರೆ ಮಿನಿ ಅಕ್ವೇರಿಯಂ ರೆಡಿಯಾಗುತ್ತದೆ

ಹಾಳಾದ ಬಲ್ಬ್ ಗೆ ಬಣ್ಣ ಬಳಿದು ಆಕರ್ಷಕ ಚಿತ್ರ ಮಾಡಿ ಅಲಂಕಾರಿಕ ವಸ್ತುವಾಗಿ ಇಡಬಹುದು

ಬಲ್ಬ್ ನ ಒಳಗಿನ ತಂತಿ ತೆಗೆದು ಅದರೊಳಗೆ ಮಕ್ಕಳಿಗಾಗಿ ಮಿನಿ ಭೂಗೋಳವನ್ನು ತಯಾರಿಸಬಹುದು

ಬಲ್ಬ್ ನ ಹಿಂಭಾಗ ಕಿತ್ತು ಹಾಕಿ ಪುಟಾಣಿ ಫ್ಲವರ್ ವಾಸ್ ಥರಾ ಸ್ಟ್ಯಾಂಡ್ ಮೇಲಿರಿಸಬಹುದು

ದೊಡ್ಡ ಬಲ್ಬ್ ಆಗಿದ್ದರೆ ಮಣ್ಣು ತುಂಬಿ ಮಿನಿ ಹ್ಯಾಂಗಿಂಗ್ ಪಾಟ್ ಥರಾ ಬಳಸಬಹುದು