ಬಾದಾಮಿ ಫ್ರೈ ಮಾಡುವುದು ಹೇಗೆ

ಬಾದಾಮಿ ತಾಜಾ ತಿನ್ನಲು ಸಪ್ಪೆ ಎನಿಸಿದರೆ ಅದಕ್ಕೆ ಮಸಾಲೆ ಸೇರಿಸಿ ಫ್ರೈ ಮಾಡಿ ಸೇವನೆ ಮಾಡಬಹುದು. ಮಸಾಲ ಬಾದಾಮಿ ಮಾಡುವುದು ಹೇಗೆ ಇಲ್ಲಿದೆ ನೋಡಿ.

Photo Credit: Instagram

ಬಾದಾಮಿಯನ್ನು ಮೊದಲು ಚೆನ್ನಾಗಿ ತೊಳೆದು ನೀರು ಆರಿಸಿ

ಈಗ ಒಂದು ಬಾಣಲೆಗೆ ಒಂದು ಕಪ್ ಬಾದಾಮಿ ಹಾಕಿ ಬಿಸಿ ಮಾಡಿ

ಈಗ ಇದಕ್ಕೆ ಕಾಲು ಚಮಚ ತುಪ್ಪ, ರುಚಿಗೆ ತಕ್ಕ ಉಪ್ಪು ಹಾಕಿ

ಬಳಿಕ ಇದಕ್ಕೆ ಧನಿಯಾ ಪೌಡರ್, ಚೂರು ಖಾರದ ಪುಡಿ ಹಾಕಿ

ಈಗ ಈ ಎಲ್ಲಾ ಮಸಾಲೆಗಳು ಸೇರಿಕೊಳ್ಳುವವರೆಗೆ ಫ್ರೈ ಮಾಡಿ

ಬಳಿಕ ಎಲ್ಲವನ್ನೂ ಒಂದು ಅಗಲ ಪಾತ್ರೆಗೆ ಹಾಕಿ ಆರಲು ಬಿಡಿ

ಹೀಗೆ ಮಸಾಲೆ ಹಾಕಿ ಮಾಡಿದ ಬಾದಾಮಿ ತಿಂಗಳವರೆಗೂ ಇಟ್ಟುಕೊಳ್ಳಬಹುದು