ಅಡುಗೆ ಸಮಯ ಉಳಿತಾಯ ಮಾಡಲು ಟಿಪ್ಸ್

ಬೆಳಿಗ್ಗೆ ಗಡಿಬಿಡಿಯಲ್ಲಿ ಬೇಗ ಅಡುಗೆ ಮುಗಿಸುವ ಧಾವಂತವಿರುತ್ತದೆ. ಅಡುಗೆ ಮಾಡುವಾಗ ಸಮಯ ಉಳಿತಾಯ ಮಾಡಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Instagram

ಬೆಳಿಗ್ಗೆ ಏನು ಅಡುಗೆ ಮಾಡಬೇಕು ಎಂಬುದನ್ನು ಬೆಳಿಗ್ಗೆಯೇ ನಿರ್ಧರಿಸಿ

ಅದಕ್ಕೆ ಬೇಕಾದ ತರಕಾರಿಗಳನ್ನು ಹಿಂದಿ ದಿನ ರಾತ್ರಿಯೇ ಕಟ್ ಮಾಡಿ

ಎರಡು ಬಗೆ ತರಕಾರಿಗಳನ್ನು ಬೇಯಿಸಬೇಕೆಂದರೆ ಒಮ್ಮೆಗೇ ಕುಕ್ಕರ್ ನಲ್ಲಿಡಿ

ಕಾಯಿತುರಿ, ಬೆಳ್ಳುಳ್ಳಿ ಸಿಪ್ಪೆಯನ್ನು ಮೊದಲೇ ತೆಗೆದು ರೆಡಿ ಮಾಡಿಟ್ಟುಕೊಳ್ಳಿ

ಗ್ಯಾಸ್ ಸ್ಟವ್ ನಲ್ಲಿ ಬೇಯಿಸುವ ಹೊತ್ತಿನಲ್ಲಿ ಪಾತ್ರೆ, ಪ್ಲೇಟ್ ರೆಡಿ ಮಾಡಿಕೊಳ್ಳಿ

ದಿನ ಬಳಕೆ ವಸ್ತುಗಳು ಖಾಲಿಯಾಗಿವೆಯೇ ಎಂದು ಮೊದಲೇ ನೋಡಿಟ್ಟುಕೊಳ್ಳಿ

ಖಾಲಿಯಾದ ವಸ್ತುಗಳಿದ್ದರೆ ಮೊದಲೇ ತುಂಬಿಸಿಟ್ಟು ಕೈಗೆಟುಕುವಂತೆ ಇಡಿ