ಕೆಲವೊಮ್ಮೆ 5-10 ಕೆಜಿ ಅಕ್ಕಿ ತಂದಿಟ್ಟಾಗ ಅದರಲ್ಲಿ ಕೆಲವು ದಿನ ಕಳೆದ ಮೇಲೆ ಹುಳ ಬೀಳವುದು ಸಹಜ. ಆದರೆ ಅಕ್ಕಿ ಬಹಳ ದಿನಗಳವರೆಗೂ ಹಾಳಾಗದಂತೆ ಸಂರಕ್ಷಿಸಿಡಲು ಕೆಲವು ಉಪಾಯಗಳಿವೆ. ಅದನ್ನು ನೋಡೋಣ.
Photo Credit: Instagram, AI image
ಶೈತ್ಯ ಹವಾಗುಣದಲ್ಲಿ ಅಕ್ಕಿ ಇಟ್ಟಾಗ ಅದು ಬೇಗನೇ ಹಾಳಾಗುವ ಸಾಧ್ಯತೆಯಿದೆ.
ಇದಕ್ಕಾಗಿ ಅಕ್ಕಿಯನ್ನು ಒಮ್ಮೆ ಬಿಸಿಲಿಗೆ ಹರಡಿ ಹಾಕಿ ಬೆಚ್ಚಗೆ ಮಾಡಿ ಇಟ್ಟುಕೊಳ್ಳಿ
ಅಕ್ಕಿ ಡಬ್ಬದೊಳಗೆ ಒಂದು ಕಹಿಬೇವಿನ ಎಲೆ ಅಥವಾ ಉಂಡೆ ಮಾಡಿ ಇಟ್ಟುಕೊಂಡರೆ ಹುಳವಾಗದು
ಅಕ್ಕಿ ಡಬ್ಬದ ಒಳಗೆ ನಾಲ್ಕೈದು ಕೆಂಪು ಮೆಣಸು ಹಾಕಿಟ್ಟರೆ ಅಕ್ಕಿಯಲ್ಲಿ ಹುಳವಾಗುವುದಿಲ್ಲ.
ಅಕ್ಕಿ ಮೂಟೆಯೊಳಗೆ ಕೆಲವು ಫ್ರೆಶ್ ಪಲಾವ್ ಎಲೆ ಹಾಕಿಟ್ಟರೆ ಹುಳ ಬರುವುದಿಲ್ಲ
ಕಡು ವಾಸನೆ ಹೊಂದಿರುವ ಬೆಳ್ಳುಳ್ಳಿಯನ್ನು ಹಾಕಿಟ್ಟರೆ ಅಕ್ಕಿಯಲ್ಲಿ ಹುಳವಾಗುವುದಿಲ್ಲ
ಆದರೆ ಅಕ್ಕಿ ಜೊತೆ ಇಂಗು ಅಥವಾ ಉಪ್ಪು ಹಾಕಿಟ್ಟರೆ ರಾಸಾಯನಿಕ ಪ್ರತಿಕ್ರಿಯೆಯಿಂದ ಅಕ್ಕಿ ಹಾಳಾಗಬಹುದು