ಮಕ್ಕಳಿಗೆ ಇಂಜೆಕ್ಷನ್ ನೋವು ನಿವಾರಿಸಲು ಟಿಪ್ಸ್

ಚಿಕ್ಕ ಮಕ್ಕಳಿಗೆ ಲಸಿಕೆ ಹಾಕಿಸಲೇಬೇಕಾಗುತ್ತದೆ. ಇಂಜೆಕ್ಷನ್ ಕೊಟ್ಟ ಬಳಿಕ ಮಕ್ಕಳು ತೀರಾ ನೋವು, ಜ್ವರದಿಂದ ಒದ್ದಾಡುತ್ತಾರೆ. ಹೀಗಾಗಿ ಇಂಜೆಕ್ಷನ್ ನೀಡಿದ ಬಳಿಕ ನೋವು ನಿವಾರಿಸಲು ಯಾವ ರೀತಿ ಆರೈಕೆ ಮಾಡಬೇಕು ನೋಡಿ.

Photo Credit: Instagram

ಮಕ್ಕಳಿಗೆ ಇಂಜೆಕ್ಷನ್ ಹಾಕಿದ ಬಳಿಕ ಆ ಭಾಗ ಊದಿಕೊಳ್ಳುವ ಸಾಧ್ಯತೆಯಿರುತ್ತದೆ

ಇಂಜೆಕ್ಷನ್ ನೀಡಿದ ಜಾಗಕ್ಕೆ ಐಸ್ ಪ್ಯಾಕ್ ನಿಂದ ಮಸಾಜ್ ಮಾಡಿದರೆ ನೋವು ಕಡಿಮೆಯಾಗುತ್ತದೆ

ಮಕ್ಕಳು ತಾಳಿಕೊಳ್ಳುವಷ್ಟು ಬಿಸಿ ನೀರಿನ ಶಾಖ ಕೊಟ್ಟರೆ ನೋವು ಶಮನವಾಗುತ್ತದೆ

ಕೈಕಾಲುಗಳನ್ನು ಹೆಚ್ಚು ಅಲುಗಾಡದಂತೆ ಮಗುವನ್ನು ಜೋಪಾನವಾಗಿ ನೋಡಿಕೊಳ್ಳಿ

ಜ್ವರ ಬಂದರೆ ವೈದ್ಯರ ಸಲಹೆ ಮೇರೆಗೆ ಜ್ವರದ ಔಷಧಿಯನ್ನು ಕೊಡಬಹುದು

ವೈದ್ಯರ ಸಲಹೆ ಪಡೆದು ಅಗತ್ಯವಿದ್ದರೆ ಮಾತ್ರ ನೋವು ನಿವಾರಕ ಔಷಧಿ ಕೊಡಬಹುದು

ಇಂಜೆಕ್ಷನ್ ಬಳಿಕ ಮಗುವಿನಲ್ಲಿ ಅಲರ್ಜಿ, ಉಸಿರಾಟದ ಸಮಸ್ಯೆ ಇತ್ಯಾದಿ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ