ಸ್ನಾನಕ್ಕೆ ಹೀಟರ್ ಬಳಸುವವರು ಈ ಟಿಪ್ಸ್ ಪಾಲಿಸಲೇಬೇಕು

ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಎಲ್ಲರಿಗೂ ಇಷ್ಟ. ಆದರೆ ಸ್ನಾನಕ್ಕೆ ನೀರು ಬಿಸಿ ಮಾಡಲು ಇಮ್ಮರ್ಷನ್ ಹೀಟರ್ ಬಳಸುತ್ತಿದ್ದರೆ ಈ ಕೆಲವು ಎಚ್ಚರಿಕೆ ವಹಿಸುವುದು ಸೂಕ್ತ.

Photo Credit: Instagram, WD

ಸ್ನಾನಕ್ಕೆ ಬಳಸುವ ಹೀಟರ್ ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳುವುದು ಉತ್ತಮ

ಇಮ್ಮರ್ಷನ್ ಹೀಟರ್ ಅಪಾಯಕಾರಿಯಾಗಿದ್ದು ಶಾಕ್ ತಗುಲಿದರೆ ಪ್ರಾಣಕ್ಕೂ ಎರವಾಗಬಹುದು

ಇಮ್ಮರ್ಷನ್ ಹೀಟರ್ ಬಳಸಿ ನೀರು ಬಿಸಿ ಮಾಡುವಾಗ ಲೋಹದ ಪಾತ್ರೆಯಲ್ಲೇ ನೀರು ಹಾಕಿ

ಪ್ಲಾಸ್ಟಿಕ್ ಬಕೆಟ್ ನಲ್ಲಿ ನೀರು ಹಾಕಿ ಹೀಟರ್ ಹಾಕಿದರೆ ಸ್ಪೋಟಗೊಳ್ಳುವ ಅಪಾಯವಿದೆ

ಇಮ್ಮರ್ಷನ್ ಹೀಟರ್ ಮೆಷಿನ್ ಮುಳುಗುವಂತೆ ನೀರು ಹಾಕಿದರೆ ಹೀಟರ್ ಬೇಗನೇ ಹಾಳಾಗಬಹುದು

ಸ್ವಿಚ್ ಆನ್ ಮಾಡಿದ ತಕ್ಷಣ ನೀರಿಗೆ ಕೈ ಹಾಕುವುದರಿಂದ ಶಾಕ್ ತಗುಲುವ ಅಪಾಯವಿದೆ

ಹೀಟರ್ ನ ವಯರ್ ಅಥವಾ ಮೆಷಿನ್ ಭಾಗಕ್ಕೆ ನೀರು ತಾಗಿದ್ದರೆ ಶಾಕ್ ತಗುಲಬಹುದು