ಸಿಲ್ಕ್ ಸೀರೆಗಳನ್ನು ತೊಳೆಯುವ ಸರಿಯಾದ ಕ್ರಮ

ಸಿಲ್ಕ್ ಸೀರೆಗಳನ್ನು ನಾಲ್ಕೈದು ಬಾರಿ ತೊಟ್ಟುಕೊಂಡ ಬಳಿಕ ಬೆವರಿನ ವಾಸನೆ ಬರಬಹುದು. ಇದನ್ನು ಡ್ರೈವಾಶ್ ಗೆ ಕೊಡುವ ಬದಲು ಮನೆಯಲ್ಲಿಯೇ ತೊಳೆಯಬಹುದು. ಅದಕ್ಕೆ ಸುಲಭ ವಿಧಾನ ಇಲ್ಲಿದೆ ನೋಡಿ.

Photo Credit: Instagram, AI image

ಸಿಲ್ಕ್ ಸೀರೆ ತೊಳೆಯಲು ಮೊದಲು ಒಂದು ಸುಲಭವಾಗಿ ಮಾಡಬಹುದಾದ ದ್ರಾವಣ ತಯಾರಿಸಿಕೊಳ್ಳಬೇಕು

ಫ್ಯಾಬ್ರಿಕ್ ಡಿಟರ್ಜೆಂಟ್, ಹದ ಬಿಸಿ ನೀರು, ಗ್ಲಿಸರಿನ್ ಬಳಸಿ ಒಂದು ದ್ರಾವಣವನ್ನು ತಯಾರಿಸಿಕೊಳ್ಳಿ

ಅಗಲವಾದ ಪಾತ್ರೆಯಲ್ಲಿ ದ್ರಾವಣ ಹಾಕಿ ನಿಧಾನವಾಗಿ ನಿಮ್ಮ ಸೀರೆಯನ್ನು ಅದರಲ್ಲಿ ಅದ್ದಿ

ಐದು ನಿಮಿಷ ಈ ನೀರಿನಲ್ಲಿ ನೆನೆಸಿಟ್ಟು ಬಳಿಕ ಹೆಚ್ಚು ಮುದ್ದೆಯಾಗದಂತೆ ಸೀರೆ ಹೊರತೆಗೆದುಕೊಳ್ಳಿ

ಈಗ ಈ ಸೀರೆಯನ್ನು ಒಂದು ತಣ್ಣೀರು ತುಂಬಿರುವ ಬಕೆಟ್ ಗೆ ಎರಡು-ಮೂರು ಸಲ ಅದ್ದಿ ತೆಗೆಯಿರಿ

ಈಗ ಸೀರೆಯನ್ನು ಹಿಂಡದೇ ಶುದ್ಧವಾದ ಕಾಟನ್ ಬಟ್ಟೆಯಿಂದ ನೀರು ಒರೆಸಿಕೊಳ್ಳಿ

ನೀರು ಬಳಿದ ನಂತರ ನೇರವಾಗಿ ಸೂರ್ಯನ ಬಿಸಿಲು ಬೀಳದ ಜಾಗದಲ್ಲಿ ಹರಡಿ ಒಣಗಲು ಬಿಡಿ