ಸೋಪ್ ಇಲ್ಲದೇ ಪಾತ್ರೆ ತೊಳೆಯುವುದು ಹೇಗೆ

ಕೆಲವರಿಗೆ ಸೋಪ್ ಬಳಕೆಯಿಂದ ಕೈ ಅಲರ್ಜಿಯಾಗುವ ಸಮಸ್ಯೆಯಿರುತ್ತದೆ. ಅಂತಹವರಿಗೆ ಸೋಪ್ ಬಳಸದೇ ಪಾತ್ರೆ ತೊಳೆಯುವುದು ಹೇಗೆ ಎಂಬ ಚಿಂತೆಯಿರುತ್ತದೆ. ಹಾಗಿದ್ದರೆ ಸೋಪ್ ಬಳಸದೇ ಪಾತ್ರೆ ತೊಳೆಯುವುದು ಹೇಗೆ ಇಲ್ಲಿ ನೋಡಿ.

Photo Credit: Instagram, AI image

ಜಿಡ್ಡಿನ ಪಾತ್ರೆಗಳಾಗಿದ್ದರೆ ಮೊದಲು ಬಿಸಿ ನೀರಿನಲ್ಲಿ ಕೆಲವು ಹೊತ್ತು ನೆನೆಸಿಡಿ

ಬಳಿಕ ಆ ಪಾತ್ರೆಯನ್ನು ನಿಂಬೆ ಹಣ್ಣಿನ ಹೋಳು ಬಳಸಿ ತಿಕ್ಕಿದರೆ ಕ್ಲೀನ್ ಆಗುತ್ತದೆ

ಸ್ವಲ್ಪ ಬೇಕಿಂಗ್ ಪೌಡರ್ ಹಾಕಿ ಪಾತ್ರೆಯನ್ನು ಉಜ್ಜಿದರೆ ಕೊಳೆ ಹೋಗುತ್ತದೆ

ವಿನೇಗರ್ ದ್ರಾವಣವನ್ನು ಪಾತ್ರೆಗೆ ಹಾಕಿ ಸ್ಕ್ರಬ್ಬರ್ ನಿಂದ ಉಜ್ಜಿದರೆ ಪಾತ್ರೆ ಬೆಳಗುತ್ತದೆ

ಬೂದಿ ಅಥವಾ ಮರದ ಪುಡಿಯನ್ನು ಪಾತ್ರೆಗೆ ಹಾಕಿ ಉಜ್ಜುವುದರಿದ ಕ್ಲೀನ್ ಆಗುತ್ತದೆ

ಸ್ವಲ್ಪ ಬೇಕಿಂಗ್ ಪೌಡರ್ ಮತ್ತು ನಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ ಸೋಪ್ ನಂತೆ ಬಳಸಬಹುದು

ಅನ್ನದ ಬಿಸಿ ಗಂಜಿ ಹಾಕಿ ಸ್ಕ್ರಬ್ಬರ್ ನಿಂದ ಉಜ್ಜಿದರೆ ಪಾತ್ರೆ ಹೊಳೆಯುತ್ತದೆ