ಈ ಹಣ್ಣುಗಳ ಪವರ್ ಗೊತ್ತಾದ್ರೆ ದಿನಾಲು ಸೇವಿಸುವಿರಿ

ನೈಸರ್ಗಿಕವಾಗಿ ಸಿಗುವ ಪ್ರತಿಯೊಂದು ಹಣ್ಣುಗಳ ಆರೋಗ್ಯಕಾರಿ ಪ್ರಯೋಜನಗಳು ನಮಗೆಲ್ಲಾ ಗೊತ್ತೇ ಇದೆ. ತಮ್ಮಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಈ ಹಣ್ಣುಗಳು ಶರೀರಕ್ಕೆ ಉಪಯುಕ್ತವಾಗಿರುತ್ತವೆ. ಇದಕ್ಕೆ ಮುಖ್ಯ ಕಾರಣ, ಹಣ್ಣುಗಳಲ್ಲಿ ಸಿಗುವ ನೈಸರ್ಗಿಕ ಸಕ್ಕರೆ ಅಂಶ ಅನೇಕ ಬಗೆಯ ವಿಟಮಿನ್ಸ್ ಹಾಗೂ ಖನಿಜಾಂಶಗಳು, ವಿವಿಧ ರೋಗಗಳ ವಿರುದ್ಧ ಹೋರಾಡಿ, ನಮ್ಮನ್ನು ಆರೋಗ್ಯವಾಗಿರಿಸುತ್ತವೆ.

photo credit social media

ನಿಮಗೆ ಗೊತ್ತಿರಲಿ, ನೈಸರ್ಗಿಕವಾಗಿ ಸಿಗುವ ತಾಜಾ ಹಣ್ಣುಗಳು, ಇಲ್ಲಾಂದರೆ ಈ ಹಣ್ಣುಗಳಿಂದ ಮಾಡಿದ ತಾಜಾ ಜ್ಯೂಸ್‌ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಆರೋಗ್ಯ ವೃದ್ಧಿ ಆಗುವುದು ಮಾತ್ರವಲ್ಲದೆ, ಅನೇಕ ಕಾಯಿಲೆಗಳಿಂದ ಕೂಡ ನಮ್ಮನ್ನು ದೂರವಿರಿಸುತ್ತದೆ.

ಚಳಿಗಾಲದಲ್ಲಿ ಹಾಗೂ ಮಳೆಗಾಲದಲ್ಲಿ ಸೀಬೆ ಹಣ್ಣು ಎಲ್ಲಾ ಕಡೆ ಸಿಗುತ್ತದೆ. ತನ್ನಲ್ಲಿ ಅಧಿಕ ಪ್ರಮಾ ಣದಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಮೆಗ್ನೀಷಿಯಂ, ನಾರಿನಾರಿಶ ಪೊಟ್ಯಾಶಿಯಂ, ಮ್ಯಾಂಗನೀಸ್ ಜೊತೆಗೆ ಇನ್ನಿತರ ಆಂಟಿಆಕ್ಸಿಡೆಂಟ್ ಅಂಶಗಳು ಯಥೇಚ್ಛವಾಗಿ ಸಿಗುವ ಈ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವುದರಿಂದ, ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ಬಿಪಿ-ಶುಗರ್ ಕಾಯಿಲೆಗಳು ಕೂಡ ನಿಯಂತ್ರಣಕ್ಕೆ ಬರುತ್ತದೆ.

ಅಷ್ಟೇ ಅಲ್ಲದೆ ಈ ಹಣ್ಣಿನಲ್ಲಿ ಕ್ಯಾಲೊರಿ ಅಂಶಗಳು ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದರಿಂದ, ದೇಹದ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಸಾಧ್ಯವಾದರೆ ಈ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.

ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡುವಂತಹ ಎಲ್ಲಾ ಆರೋಗ್ಯಕಾರಿ ಗುಣ ಲಕ್ಷಣಗಳು ಕೂಡ ಈ ಹಣ್ಣಿನಲ್ಲಿ ಕಂಡು ಬರುವುದರಿಂದ, ದಿನಕ್ಕೊಂದು ಲೋಟ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದರೆ, ಸಣ್ಣ-ಪುಟ್ಟ ಕಾಯಿಲೆಗಳಿಂದ ಹಿಡಿದು, ದೀರ್ಘ ಕಾಲದ ಕಾಯಿಲೆಗಳನ್ನು ಕೂಡ ನಿಯಂತ್ರಣ ಮಾಡುತ್ತದೆ.

ಹಣ್ಣಿನಲ್ಲಿ ಅಧಿಕ ಪ್ರಮಾಣದ ವಿಟಮಿನ್ ಗಳು, ಖನಿಜಾಂಶ, ನಾರಿನಾಂಶ ಹಾಗೂ ಆರೋಗ್ಯಕಾರಿ ಆಂಟಿಆಕ್ಸಿಡೆಂಟ್ ಅಂಶಗಳು ಯಥೇಚ್ಛವಾಗಿ ಸಿಗುತ್ತದೆ. ಹೀಗಾಗಿ ಇದರ ಸಿಪ್ಪೆ ತೆಗೆದು ಅದರ ಬೀಜಗಳನ್ನು ಬೇರ್ಪಡಿಸಿಕೊಂಡು ಜ್ಯೂಸ್ ಮಾಡಿ, ಪ್ರತಿ ದಿನ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ಆರೋಗ್ಯದಲ್ಲಿ ರಕ್ತದ ಒತ್ತಡವನ್ನು ಹೆಚ್ಚು ಅಥವಾ ಕಡಿಮೆ ಆಗದಂತೆ ನೋಡಿ ಕೊಂಡು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಆರೋಗ್ಯಕ್ಕೆ ತುಂಬಾನೇ ಒಳ್ಳೆಯ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ಎಲ್ಲಾ ಕಡೆ ಕೂಡ ಸಿಗುವ ಈ ಹಣ್ಣಿನಲ್ಲಿ, ಹಲವಾರು ಬಗೆಯ ವಿಟಮಿನ್‍ಗಳು ಹಾಗೂ ಖನಿಜಾಂಶಗಳು ಸಿಗುವುದರಿಂದ ಹಾಗೆ ತಿನ್ನಬಹುದು ಅಥವಾ ಅದರ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.

ಮುಖ್ಯವಾಗಿ ಈ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವುದರಿಂದ, ದೇಹವನ್ನು ನಿರ್ಜಲೀಕರಣದಿಂದ ತಪ್ಪಿಸುವುದು ಮತ್ತು ದಾಹ ತಣಿಸುವುದು. ಅಷ್ಟೇ ಅಲ್ಲದೆ ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶದ ಜೊತೆಗೆ ದೇಹದ ಉರಿಯೂತ ನಿವಾರಣೆ ಮಾಡುವ ಎಲ್ಲಾ ಗುಣಲಕ್ಷಣಗಳು ಕೂಡ ಹೇರಳವಾಗಿ ಸಿಗುವುದರಿಂದ ಸಂಧಿವಾತದಂತಹ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುವುದು.