ಮಳೆಗಾಲಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪಾನೀಯಗಳು

ಇನ್ನೇನು ಮಳೆಗಾಲ ಬಂತು. ಜೊತೆಗೆ ವೈರಾಣುಗಳಿಂದ ಬರುವ ರೋಗಗಳೂ ಹೆಚ್ಚಾಗುತ್ತವೆ. ಜ್ವರ, ಸೋಂಕು ರೋಗಗಳು ಈ ಕಾಲದಲ್ಲಿ ಹೆಚ್ಚಾಗುತ್ತವೆ. ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವೊಂದು ಪಾನೀಯಗಳನ್ನು ಸೇವಿಸುವುದು ಉತ್ತಮ.

credit: social media

ಕಾಳುಮೆಣಸಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು ಪ್ರತಿನಿತ್ಯ ಇದರ ಕಷಾಯ ಮಾಡಿ ಸೇವಿಸಿ

ನಾವು ಪ್ರತಿನಿತ್ಯ ಸೇವಿಸುವ ಚಹಾ ಮತ್ತು ಕಾಫಿಗೆ ಕೊಂಚ ಶುಂಠಿ ಸೇರಿಸಿ ಸೇವಿಸಬೇಕು

ಜೀರಿಗೆ ಮತ್ತು ಕಾಳು ಮೆಣಸು ಹಾಕಿ ಕಷಾಯ ಮಾಡಿಕೊಂಡು ಕುಡಿದರೆ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ

ಶಕ್ತಿವರ್ಧಕ ಹಾಲಿಗೆ ಒಂದು ಚಿಟಿಕೆ ಅರಸಿನ ಬೆರೆಸಿ ಹದ ಬಿಸಿ ಮಾಡಿಕೊಂಡು ಪ್ರತಿನಿತ್ಯ ಸೇವಿಸಿ

ಹದ ಬಿಸಿ ನೀರಿಗೆ ಕೊಂಚ ಜೇನು ತುಪ್ಪ ಮತ್ತು ನಿಂಬೆ ರಸ ಸೇರಿಸಿಕೊಂಡು ಸೇವಿಸಿ ನೋಡಿ

ವಿಟಮಿನ್ 12 ಜೊತೆಗೆ ರೋಗ ನಿರೋಧಕ ಹೆಚ್ಚಿಸುವ ಬಾದಾಮಿ ಹಾಲನ್ನು ಪ್ರತಿನಿತ್ಯ ಸೇವಿಸಿ

ಟೊಮೆಟೊ, ಕಾಳುಮೆಣಸು ಮತ್ತು ಬೆಳ್ಳುಳ್ಳಿ ಸೇರಿಸಿ ಸೂಪ್ ಮಾಡಿಕೊಂಡು ಸೇವಿಸಿದರೆ ಉತ್ತಮ