ದಿಡೀರ್ ಮಾಡಬಹುದಾದ ಸಿಹಿತಿಂಡಿ ರೆಸಿಪಿ

ಮನೆಗೆ ಅನಿರೀಕ್ಷಿತವಾಗಿ ನೆಂಟರು ಬಂದಾಗ ಏನು ಮಾಡಬೇಕೆಂದೇ ತೋಚುವುದಿಲ್ಲ. ತರಾತುರಿಯಲ್ಲಿ ನಾವು ಮಾಡಬಹುದಾದ ಒಂದು ಸಿಹಿತಿನಿಸಿನ ರೆಸಿಪಿ ಮಾಡುವುದನ್ನು ಇಂದು ನೋಡೋಣ.

Photo Credit: Social Media

ದಿಡೀರ್ ಆಗಿ ಗೋಧಿ ಲಾಡು ಮಾಡುವ ವಿಧಾನವನ್ನು ಇಲ್ಲಿ ಹೇಳಲಾಗಿದೆ

ಗೋಧಿ ಲಾಡಿಗೆ ಗೋಧಿ ಹಿಟ್ಟು, ಸಕ್ಕರೆ, ತುಪ್ಪ, ಏಲಕ್ಕಿ, ಒಣದ್ರಾಕ್ಷಿ ಇದ್ದರೆ ಸಾಕು

ಮೊದಲು ಸ್ವಲ್ಪ ತುಪ್ಪ ಹಾಕಿ ಗೋಧಿ ಹಿಟ್ಟನ್ನು ಚೆನ್ನಾಗಿ ಹುರಿದುಕೊಳ್ಳಬೇಕು

ಇದು ಚೆನ್ನಾಗಿ ಬಿಸಿ ಆಗುವವರೆಗೂ ಹುರಿದ ಬಳಿಕ ಸ್ಟೌ ಆಫ್ ಮಾಡಿ

ಇನ್ನೊಂದು ಪಾತ್ರೆಯಲ್ಲಿ ಒಂದೆಳೆ ಪಾಕದ ಸಕ್ಕರೆ ಪಾಕ ತಯಾರಿಸಿ

ಸಕ್ಕರೆ ಪಾಕಕ್ಕೆ ಸ್ವಲ್ಪ ಏಲಕ್ಕಿಯನ್ನು ಜಜ್ಜಿ ಹಾಕಿದರೆ ಘಮ ಹೆಚ್ಚುತ್ತದೆ.

ಗೋಧಿ ಹಿಟ್ಟಿಗೆ ಸ್ವಲ್ಪ ಒಣದ್ರಾಕ್ಷಿ ಮತ್ತು ಸಕ್ಕರೆ ಪಾಕ ಹಾಕಿ ಬಿಸಿ ಉಂಡೆ ಕಟ್ಟಿದರೆ ಲಾಡು ರೆಡಿ