ತುಪ್ಪ ತಿಂದರೆ ದಪ್ಪಗಾಗುವುದು ನಿಜಾನಾ

ತುಪ್ಪ ಹೆಚ್ಚು ತಿಂದರೆ ದಪ್ಪಗಾಗುತ್ತೇವೆ, ಅದರಲ್ಲಿ ಕೊಬ್ಬಿನಂಶ ಹೆಚ್ಚಿದೆ ಎಂಬಿತ್ಯಾದಿ ಕಲ್ಪನೆಗಳು ನಮಗಿದೆ. ಆದರೆ ನಿಜವಾಗಿಯೂ ತುಪ್ಪ ತಿಂದರೆ ದಪ್ಪಗಾಗುತ್ತೇವಾ? ಇದರಲ್ಲಿರುವ ಆರೋಗ್ಯಕರ ಅಂಶವೇನು ಎಂದು ತಿಳಿದುಕೊಳ್ಳಿ.

credit: social media

ಆಯುರ್ವೇದದ ಪ್ರಕಾರ ತುಪ್ಪ ನಿಮ್ಮ ಜಠರಾಗ್ನಿಯನ್ನು ಸರಿಪಡಿಸುತ್ತದೆ.

ತುಪ್ಪದಲ್ಲಿ ಕೊಬ್ಬಿನಂಶ ಇದ್ದರೂ ಅದು ಶರೀರಕ್ಕೆ ಹಾನಿಕಾರಕವಾದ ಕೊಬ್ಬಿನಂಶವಲ್ಲ.

ತುಪ್ಪವನ್ನು ಪ್ರತಿನಿತ್ಯ ಆಹಾರದಲ್ಲಿ ಬಳಸುವುದರಿಂದ ಥೈರಾಯ್ಡ್ ಸಮಸ್ಯೆಗೆ ಪರಿಹಾರ

ತುಪ್ಪ ನಿಯಮಿತವಾಗಿ ಸೇವಿಸುತ್ತಿದ್ದರೆ ಮೆದುಳು, ಸ್ಮರಣ ಶಕ್ತಿ ಹೆಚ್ಚಿಸಲು ಸಹಾಯಕ

ಸಂಧು ವಾತದ ನೋವಿನಿಂದ ಬಳಲುತ್ತಿರುವವರಿಗೆ ತುಪ್ಪ ಲೂಬ್ರಿಕೆಂಟ್ ಆಯಿಲ್ ರೀತಿ ಕೆಲಸ ಮಾಡುತ್ತದೆ

ತುಪ್ಪದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ.

ಬ್ಯಾಕ್ಟೀರಿಯಾ ಅಥವಾ ಸೋಂಕು ರೋಗಗಳನ್ನು ಬೇಗನೇ ಗುಣ ಮಾಡುವ ಶಕ್ತಿ ಹೊಂದಿರುತ್ತದೆ.